25 C
Udupi
Thursday, February 19, 2026
spot_img
spot_img
HomeBlogಕಾರ್ಕಳ ಜ್ಞಾನಸುಧಾ: ಜೆಇಇ ಮೈನ್ ಸಾಧಕರಿಗೆ ಸನ್ಮಾನ

ಕಾರ್ಕಳ ಜ್ಞಾನಸುಧಾ: ಜೆಇಇ ಮೈನ್ ಸಾಧಕರಿಗೆ ಸನ್ಮಾನ

ವಿದ್ಯಾರ್ಥಿ ಜೀವನದಲ್ಲಿ ಶಿಸ್ತುಬದ್ಧವಾದ ನಡೆ-ನಡವಳಿಕೆ ಇಟ್ಟುಕೊಂಡವನು ಶೈಕ್ಷಣಿಕ ಕ್ಷೇತ್ರದಲಿ ಸಾಧಕನಾಗಿ ಹೊರಹೊಮ್ಮಲು ಸಾಧ್ಯ. ಇದಕ್ಕೆ ಪೂರಕವಾದ ವಾತವರಣವು ಜ್ಞಾನಸುಧಾದಲ್ಲಿದೆ. ಡಾ.ಸುಧಾಕರ್ ಶೆಟ್ಟಿಯವರ ಮಾರ್ಗದರ್ಶನ ಹಾಗೂ ಜ್ಞಾನಸುಧಾ ಒಟ್ಟು ಕುಟುಂಬವಾಗಿ ದುಡಿಯುತ್ತಿರುವುದರ ಪ್ರತಿಫಲವೇ ಇಂತಹ ಅತ್ಯುತ್ತಮ ಫಲಿತಾಂಶಗಳಾಗಿವೆ ಎಂದು ಕಾರ್ಕಳ ಜ್ಞಾನಸುಧಾದ ಪೂರ್ವ ವಿದ್ಯಾರ್ಥಿ ಕಾಲೇಜಿನ ಪೂರ್ವ ವಿದ್ಯಾರ್ಥಿ, CPU Formal Verification Engineer @ Qualcommನ ಮನ್ವಿತ್ ಪ್ರಭು ನುಡಿದರು.
ಅವರು ಕಾರ್ಕಳ ಜ್ಞಾನಸುಧಾದ ಪ್ರಾಂಗಣದಲ್ಲಿ ಜೆಇಇ ಮೈನ್ (ಬಿ.ಟೆಕ್) – 2026ರ ಮೊದಲ ಹಂತದ ಫಲಿತಾಂಶದಲ್ಲಿ ಕಾಲೇಜಿನ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನ ನೆರವೇರಿಸಿ ಮಾತನಾಡಿದರು.


ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷರಾದ ಡಾ. ಸುಧಾಕರ ಶೆಟ್ಟಿಯವರು ಮಾತನಾಡುತ್ತಾ, ಪ್ರಾಮಾಣಿಕ ಪರಿಶ್ರಮದಿಂದ ಪಡೆದ ಫಲಿತಾಂಶಕ್ಕೆ ನ್ಯಾಯವನ್ನು ಕೊಡುವ ಜವಾಬ್ದಾರಿ ನಾವು ಮಾಡಿದ್ದೇವೆ ಎಂಬ ತೃಪ್ತಿ ನಮಗಿದೆ. ಎಷ್ಟೇ ಅತ್ಯುತ್ತಮ ಅಂಕ ಗಳಿಸಿಕೊಂಡರು ತಂದೆ ತಾಯಿ ಗುರುಹಿರಿಯರನ್ನು ಗೌರವಿಸಿಕೊಂಡು ಬಾಳಿದರೇ ನಿಜವಾದ ಸಾಧಕನ ವ್ಯಕ್ತಿತ್ವಕ್ಕೆ ಗೌರವ ಬರಲು ಸಾಧ್ಯ ಎಂದರು


ಸಾಧರಿಗೆ ಸನ್ಮಾನ :

ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿನ ವತಿಯಿಂದ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಜೆ.ಇ.ಇ ಮೈನ್ (ಬಿ.ಟೆಕ್) – 2026ರ ಮೊದಲ ಹಂತದ ಫಲಿತಾಂಶದಲ್ಲಿ 97ಕ್ಕಿಂತ ಅಧಿಕ ಪರ್ಸಂಟೈಲ್ ಗಳಿಸಿದ ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. 99.9055199 ಪರ್ಸಂಟೈಲ್ ಪಡೆದು ಟಾಪರ್ ಆಗಿ ಹೊರಹೊಮ್ಮಿದ ಕನಿಷ್ಕ್ ಅಮೀನ್‌ರವರಿಗೆ 1 ಲಕ್ಷ ರೂಪಾಯಿಯನ್ನು, 99.5087645 ಪರ್ಸಂಟೈಲ್ ಪಡೆದ ತುಷಾರ್ ಎ ಶೆಟ್ಟಿಯವರಿಗೆ ರೂ.25 ಸಾವಿರವನ್ನು, 99.4253270 ಪರ್ಸಂಟೈಲ್ ಪಡೆದ ನಿಶಾನ್ ಎನ್ ಸಾಲ್ಯಾನ್‌ರನ್ನು ಹಾಗೂ 99.2313099 ಪರ್ಸಂಟೈಲ್ ಪಡೆದ ತೇಜಸ್ ನಾಯಕ್‌ರನ್ನು ತಲಾ ರೂ.15ಸಾವಿರ ನಗದು ಪುಸ್ಕಾರ ನೀಡಿ ಗೌರವಿಸಲಾಯಿತು.


ಜೊತೆಗೆ 98ಕ್ಕಿಂತ ಅಧಿಕ ಪರ್ಸಂಟೈಲ್ ಪಡೆದ ಮನೋಜ್ ಎಂ (98.9239678 ಪರ್ಸಂಟೈಲ್), ವೈಷ್ಣವಿ ಕುಲಕರ್ಣಿ (98.8384918 ಪರ್ಸಂಟೈಲ್), ಸಂಜನಾ ಬಿ.ಎ (98.7722886 ಪರ್ಸಂಟೈಲ್), ಸಾಯಿರಾಘವೇಂದ್ರ ಬಿ. (98.6885295 ಪರ್ಸಂಟೈಲ್), ಮಯೂರ್ ವಿ ಗೌಡ (98.5943336 ಪರ್ಸಂಟೈಲ್), ವರುಣ್ ಜೆ (98.5707051 ಪರ್ಸಂಟೈಲ್), ಜೀವನ್ ಎನ್ ಬಿ (98.3173191 ಪರ್ಸಂಟೈಲ್), ದಿಗಂತ್ ಎಸ್ (98.2292253 ಪರ್ಸಂಟೈಲ್) ಹಾಗೂ ಎನ್.ಎಸ್.ವಿವೇಕ್ (98.1685978 ಪರ್ಸಂಟೈಲ್) ಇವರಿಗೆ ತಲಾ ರೂ. ಒಂದು ಸಾವಿರ ಹಾಗೂ 97ಕ್ಕಿಂತ ಅಧಿಕ ಪರ್ಸಂಟೈಲ್ ಪಡೆದ 21 ವಿದ್ಯಾರ್ಥಿಗಳಿಗೆ ತಲಾ ರೂ.500 ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. ಈ ಮೂಲಕ ಅಜೆಕಾರ್ ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟಿನಿಂದ ಕಾರ್ಕಳ ಜ್ಞಾನಸುಧಾ ಸಾಧಕರಿಗೆ 1.74ಲಕ್ಷವನ್ನು ಪ್ರೋತ್ಸಾಹ ಧನ ವಿತರಿಸಲಾಯಿತು.


ಕಾರ್ಯಕ್ರಮದಲ್ಲಿ ಟ್ರಸ್ಟಿಗಳಾದ ಶ್ರೀಮತಿ ವಿದ್ಯಾವತಿ ಸುಧಾಕರ್ ಶೆಟ್ಟಿ, ಅನಿಲ್ ಕುಮಾರ್ ಜೈನ್, ಗಣಪತಿ ಪೈ, ಹಿತೈಷಿಗಳಾದ ದೇವೇಂದ್ರ ನಾಯಕ್ ಹಗೂ ತ್ರಿವಿಕ್ರಮ ಕಿಣಿ, ಸಿ.ಇ.ಒ ದಿನೇಶ್ ಎಂ ಕೊಡವೂರ್, ಪಿ.ಆರ್.ಒ ಜ್ಯೋತಿ ಪದ್ಮನಾಭ ಭಂಡಿ, ಉಪಪ್ರಾಂಶುಪಾಲರುಗಳಾದ ಶ್ರೀ ಸಾಹಿತ್ಯ ಹಾಗೂ ಶ್ರೀಮತಿ ಉಷಾ ರಾವ್ ಯು, ಡೀನ್ ಅಕಾಡೆಮಿಕ್ಸ್ ಡಾ. ಮಿಥುನ್ ಯು, ಜ್ಞಾನಸುಧಾ ಎಂಟ್ರೆನ್ಸ್ ಅಕಾಡೆಮಿಯ ಸಂಯೋಜಕ ಸಂದೀಪ, ಡಿಣ್ ಸ್ಟೂಡೆಂಟ್ಸ್ ಅಪೈರ್ ಶಕುಂತಲಾ ಎಂ ಸುವರ್ಣ ಸಹಿತ ಎಲ್ಲಾ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು. ಆಂಗ್ಲಭಾಷಾ ವಿಭಾಗದ ಮುಖ್ಯಸ್ಥೆ ಸಂಗೀತಾ ಕುಲಾಲ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page