30.7 C
Udupi
Tuesday, February 17, 2026
spot_img
spot_img
HomeBlogನೀರೆ ಗ್ರಾಮ ಪಂಚಾಯತ್ ನಲ್ಲಿ, ಅಧ್ಯಕ್ಷ ಉಪಾಧ್ಯಕ್ಷ, ಸದಸ್ಯರುಗಳಿಗೆ ಬೀಳ್ಕೊಡುಗೆ ಹಾಗೂ ಸನ್ಮಾನ

ನೀರೆ ಗ್ರಾಮ ಪಂಚಾಯತ್ ನಲ್ಲಿ, ಅಧ್ಯಕ್ಷ ಉಪಾಧ್ಯಕ್ಷ, ಸದಸ್ಯರುಗಳಿಗೆ ಬೀಳ್ಕೊಡುಗೆ ಹಾಗೂ ಸನ್ಮಾನ

spot_imgspot_img

ಗ್ರಾಮ ಪಂಚಾಯತ್ ಚುನಾಯಿತ ಪ್ರತಿನಿಧಿಗಳ ಐದು ವರ್ಷದ ಆಡಳಿತಾವಧಿ (16/02/2026) ಕೊನೆಗೊಳ್ಳುತ್ತಿದ್ದು ,ಈ ಸಂದರ್ಭ ನೀರೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಜೊತೆಯಾಗಿ ನೀರೆ ಗ್ರಾಮ ಪಂಚಾಯತ್ ನ್ನು ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಗುರುತಿಸುವ ಹಾಗೆ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾಡಿ ಇಡೀ ಗ್ರಾಮಕ್ಕೆ ಕೀರ್ತಿಯನ್ನು ತಂದಂತಹ ಗ್ರಾಮ ಪಂಚಾಯ್ತಿನ ಕ್ರಿಯಾಶೀಲ ಅಧ್ಯಕ್ಷರಾದ ಸಚ್ಚಿದಾನಂದ ಪ್ರಭು, ಉಪಾಧ್ಯಕ್ಷೆ ವಿದ್ಯಾ ಎಸ್. ಶೆಟ್ಟಿ ಹಾಗೂ ಎಲ್ಲಾ ಗ್ರಾಮ ಪಂಚಾಯತ್ ಸದಸ್ಯರುಗಳಿಗೆ ಅವರ ಐದು ವರ್ಷದ ಸೇವೆಯನ್ನು ಗುರುತಿಸಿ ಗೌರವದ ಸನ್ಮಾನವನ್ನು ನೆರವೇರಿಸಿದರು..

ಈ ಸಂದರ್ಭ ಕಾರ್ಕಳ ತಾಲೂಕಿನ ತಹಶೀಲ್ದಾರ್ ಪ್ರದೀಪ್ ಆರ್ ಅವರನ್ನು ನೀರೆ ಗ್ರಾಮ ಪಂಚಾಯತ್ ಅಭಿವೃದ್ಧಿಯಲ್ಲಿ ಅವರ ಸಹಕಾರವನ್ನು ಸ್ಮರಿಸುತ್ತಾ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಬೈಲೂರು ಭಾಗದಲ್ಲಿ ಸುಮಾರು 9 ವರ್ಷಗಳಿಂದ *ಮೆಸ್ಕಾಂ ನ ಸಹಾಯಕ ಇಂಜಿನಿಯರಾಗಿ ಕಾರ್ಯ ನಿರ್ವಹಿಸಿ ಗ್ರಾಮ ಪಂಚಾಯತ್ನ ಪ್ರತಿ ಬೇಡಿಕೆಗೂ ತಕ್ಷಣ ಸ್ಪಂದಿಸುತ್ತಿರುವ ವಿನೋದ್ ಕುಮಾರ್ ಅವರನ್ನು ಈ ಸಂದರ್ಭ ಶಾಲು ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ವೇದಿಕೆಯಲ್ಲಿ ಗಣ್ಯರಾದ ಶ್ರೀ ವಿಕ್ರಂ ಹೆಗ್ಡೆ, ನೀರೆ ರವೀಂದ್ರ ನಾಯಕ್, ಮಾಲಿನಿ ಜೆ. ಶೆಟ್ಟಿ, ಚಂದನ್ ಹೆಗ್ಡೆ, ನೂತನ ಆಡಳಿತ ಅಧಿಕಾರಿ ಗೋಪಾಲ ತಿಮ್ಮಣ್ಣ ಕಾಕನೂರ, ಅಜೆಕಾರು ಪಿ.ಡಿ.ಒ. ಅಂಕಿತ ನಾಯಕ್, ನಿಕಟಪೂರ್ವ ಅಧ್ಯಕ್ಷೆ ಶಾಲಿನಿ, ಉಪಾಧ್ಯಕ್ಷ ಸತೀಶ್ ಉಪಸ್ಥಿತರಿದ್ದರು..

ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸಚ್ಚಿದಾನಂದ ಪ್ರಭು ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಂಚಾಯತಿ ಸಿಬ್ಬಂದಿ ಗಣೇಶ್ ಅವರ ನಾಡಗೀತೆಯೊಂದಿಗೆ ಆರಂಭವಾಗಿ ಗ್ರಾಮ ಪಂಚಾಯತ್ ಪಿ ಡಿ ಓ ನಾಗರಾಜ್ ರವರು ಸ್ವಾಗತಿಸಿದರು.. ವಿಕ್ರಮ್ ಹೆಗ್ಡೆಯವರು ಪ್ರಾಸ್ತಾವಿಕ ಮಾತುಗಳಾಡಿದರು.. ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ವಿದ್ಯಾ ಶೆಟ್ಟಿ ಧನ್ಯವಾದವಿತ್ತರು.. ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ರಮೇಶ್ ಕಲ್ಲೊಟ್ಟೆ ಕಾರ್ಯಕ್ರಮ ನಿರೂಪಣೆಗೈದರು.

ಉದ್ಯಮಿಗಳಾದ ಶ್ರೀ ಉದಯಕುಮಾರ್ ಹೆಗ್ಡೆ , ಶ್ರೀರಾಮಕೃಷ್ಣ ಶೆಟ್ಟಿ, ಸಂಜೀವಿನಿ ಸದಸ್ಯರುಗಳು , ಸ್ವಚ್ಛತಾ ಸಿಬ್ಬಂದಿಗಳು, ಅಂಗನವಾಡಿ ಕಾರ್ಯಕರ್ತರು, ಗ್ರಾಮಸ್ಥರ ಉಪಸ್ಥಿತಿಯೊಂದಿಗೆ ಗ್ರಾಮ ಪಂಚಾಯತ್ ಸಿಬ್ಬಂದಿ ವರ್ಗ ಕಾರ್ಯಕ್ರಮಕ್ಕೆ ಸಹಕರಿಸಿದರು.

spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page