
ಮಂಗಳೂರು ಹೊರವಲಯದ ತೊಕ್ಕೊಟ್ಟು ಫ್ಲೈ ಓವರ್ ನಲ್ಲಿ ಬೆಳ್ಳಂಬೆಳಗ್ಗೆ ಮಾರಕಾಸ್ತ್ರಗಳಿಂದ ದಾಳಿ ಮಾಡಿ ರೌಡಿಶೀಟರ್ ಆರೀಫ್ ಯಾನೆ ಟಾಬ್ಲೆಟ್ ಆರೀಫ್ ನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ.
46 ವರ್ಷದ ಆರಿಫ್ ಮುಳ್ಳುಗುಡ್ಡೆ ಹೌಸ್ ತಳಪಾಡಿ ನಿವಾಸಿಯಾಗಿದ್ದಾನೆ. ಬೈಕ್ ನಲ್ಲಿ ತೆರಳುತ್ತಿದ್ದ ಆರಿಫ್ ಗೆ ದುಷ್ಕರ್ಮಿಗಳ ತಂಡ ಹಿಂಬದಿಯಿಂದ ಕಾರುಡಿಕ್ಕಿ ಹೊಡಿಸಿ, ಕೆಳಗೆ ಬೀಳಿಸಿ ರಸ್ತೆಗೆ ಬಿದ್ದ ಆರಿಫ್ ನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಲಾಗಿದೆ.
ಅಪರಾಧ ಪ್ರಕರಣಗಳಲ್ಲಿ ತೊಡಗಿಸಿಕೊಂಡಿದ್ದ ಆರಿಫ್ ನನ್ನು, ವೈಯಕ್ತಿಕ ದ್ವೇಷದಿಂದ ಹತ್ಯೆಗೈದಿರುವ ಶಂಕೆ ವ್ಯಕ್ತಪಡಿಸಲಾಗಿದೆ. 2022 ರಲ್ಲಿ ಉಚ್ಚಿಲ ಸೇತುವೆ ಸಮೀಪ ಆರಿಫ್ ಮೇಲೆ ಕೊಲೆಗೆ ಯತ್ನ ನಡೆಸಲಾಗಿತ್ತು.
ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ.






















































