ಕಮಲಾಕ್ಷ ಕಾಮತ್ ಇವರಿಂದ, ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಯಶಸ್ಸು ಗಳಿಸಲು “ಪ್ರೇರಣಾದಾಯಕ ಕಾರ್ಯಕ್ರಮ”

ಕಾರ್ಕಳ ಸುಂದರ ಪುರಾಣಿಕ ಸ್ಮಾರಕ ಸರಕಾರಿ ಪ್ರೌಢಶಾಲೆ ಪೆರ್ವಾಜೆ ಇಲ್ಲಿ ಫೆಬ್ರವರಿ 5 ರ ಗುರುವಾರದಂದು ಕಾರ್ಕಳ ಕಮಲಾಕ್ಷ ಕಾಮತ್ ಇವರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಯಶಸ್ಸು ಗಳಿಸಲು ಪ್ರೇರಣಾದಾಯಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ದಿನ ಬೆಳಿಗ್ಗೆ 10:30 ಕ್ಕೆ ಶಾಲೆಯ ಎಸ್.ಡಿ. ಎಂ. ಸಿ. ಅಧ್ಯಕ್ಷರಾದ ಆನಂದ್ರಾಯ ನಾಯಕ್ ಇವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾರ್ಕಳ ಕಮಲಾಕ್ಷ ಕಾಮತ್ ರವರು ಎಲ್ಲಾ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮುಂಬರುವ ಎಸ್. ಎಸ್. ಎಲ್. ಸಿ. ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯಲು ದಿನದ 12 ಗಂಟೆಗಳ ಕಾಲ ಓದಿನಲ್ಲಿ ತೊಡಗಿಸಿಕೊಂಡು ಕಠಿಣ ಪರಿಶ್ರಮ ಮಾಡಬೇಕು ಹಾಗೂ ಎಲ್ಲಾ ವಿಷಯಗಳಿಗೆ ಸಮನಾದ ಪ್ರಾಮುಖ್ಯತೆಯನ್ನು ನೀಡಿ ಸಮಯ ವ್ಯರ್ಥವಾಗದಂತೆ ಯಾವುದೇ ಆತಂಕಕ್ಕೆ ಒಳಗಾಗದೆ ಸಮಾಧಾನಕರವಾಗಿದ್ದುಕೊಂಡು ಅಭ್ಯಾಸ ಮಾಡುವುದು. ಗುರು ಹಿರಿಯರನ್ನು ಗೌರವಿಸುವುದು, ತಂದೆ ತಾಯಿಯವರನ್ನು ಗೌರವಿಸುವುದು ಹಾಗೂ ದೇವರ ಮೇಲೆ ಅನನ್ಯ ಭಕ್ತಿಯನಿಟ್ಟುಕೊಂಡಲ್ಲಿ ಉತ್ತಮ ಫಲಿತಾಂಶ ಬರಲು ಸಾಧ್ಯವೆಂದು ತಿಳಿಸಿದರು. ಅವರ ಯಶಸ್ಸಿನ ಗುಟ್ಟನ್ನು ಮಕ್ಕಳಿಗೆ ತಿಳಿಸುವುದರ ಮೂಲಕ ಮಕ್ಕಳಲ್ಲಿ ಇನ್ನಷ್ಟು ಜಾಗೃತಿಯನ್ನು ಮೂಡಿಸಿದರು. ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಎಲ್ಲಾ ವಿದ್ಯಾರ್ಥಿಗಳು ಇನ್ನುಳಿದ ದಿನಗಳಲ್ಲಿ ಕಲಿಕೆಗೆ ಹೆಚ್ಚಿನ ಒತ್ತು ನೀಡಿ ಉತ್ತಮ ಫಲಿತಾಂಶವನ್ನು ತಂದು ಕೊಡುವಂತೆ ತಿಳಿಸಿದರು. ಶಾಲಾ ಮುಖ್ಯ ಶಿಕ್ಷಕರಾದ ದಿವಾಕರ ಸ್ವಾಗತಿಸಿ ಸಂಗೀತ ಶಿಕ್ಷಕರಾದ ಕೃಷ್ಣಪ್ಪ ಇವರ ಮಾರ್ಗದರ್ಶನದಲ್ಲಿ ಪ್ರಾರ್ಥನೆ ನಡೆಸಲಾಯಿತು. ಸಹ ಶಿಕ್ಷಕರಾದ ಬಾಲಕೃಷ್ಣ ನಾಯಕ್ ಕಾರ್ಯಕ್ರಮವನ್ನು ನಿರೂಪಿಸಿ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ವೇದಾವತಿ ಅರ್ಪಿಸಿದರು. ಕಮಲಾಕ್ಷ ಕಾಮತ್ ರವರು ಎಲ್ಲಾ ವಿದ್ಯಾರ್ಥಿಗಳಿಗೆ ತಿಂಡಿಯ ವ್ಯವಸ್ಥೆಯನ್ನು ಮಾಡಿದ್ದರು.



















