ಫೆ.7ರಂದು,ತೃತೀಯ ವರ್ಷದ,”ವಿಹಾನೋತ್ಸವ”

ವಿಹಾನಾ ಮೆಲೋಡಿಸ್, ಕರೋಕೆ ಗಾಯನ ತರಬೇತಿ ಸಂಸ್ಥೆ ಕಾರ್ಕಳ, ಇದರ ತೃತೀಯ ವರ್ಷದ,,”ವಿಹಾನೋತ್ಸವ” ಫೆಬ್ರವರಿ 7 ಸಂಜೆ 5 ಗಂಟೆಗೆ ರೋಟರಿ ಬಾಲ ಭವನ ಕೋರ್ಟ್ ರಸ್ತೆ, ಕಾರ್ಕಳ ಇಲ್ಲಿ ನಡೆಯಲಿರುವುದು.
ಉದ್ಘಾಟಕರಾಗಿ ಅಶೋಕ್ ರಾವ್ ಚಾರಿಟೇಬಲ್ ಟ್ರಸ್ಟ್ ಕಾರ್ಕಳ ಇದರ ಆಡಳಿತ ಟ್ರಸ್ಟಿ, ದಿನೇಶ್ ಕೆ.ರಾವ್ , ಅಧ್ಯಕ್ಷರಾಗಿ ಪ್ರಾಥಮಿಕ ಆರೋಗ್ಯ ಕೇಂದ್ರ ಇರ್ವತ್ತೂರು ಇದರ ಆಡಳಿತ ವೈದ್ಯಾಧಿಕಾರಿಗಳಾದ ಡಾ. ಯಶೋಧರ ಎಂ., ಮುಖ್ಯ ಅತಿಥಿಗಳಾಗಿ ರೋಟರಿ ಆನ್ ಕ್ಲಬ್ ಕಾರ್ಕಳ ಇದರ ಅಧ್ಯಕ್ಷರಾದ ಜಯಂತಿ ನಾಯ್ಕ್ , ಶಾರದಾ ಮಹಿಳಾ ಮಂಡಲ ಅನಂತಶಯನ ಕಾರ್ಕಳ ಇದರ ಅಧ್ಯಕ್ಷರಾದ ಸಾವಿತ್ರಿ ಮನೋಹರ್ ಭಾಗವಹಿಸಲಿದ್ದಾರೆ. ಸಂಜೆ 6 ಗಂಟೆಯಿಂದ ವಿಹಾನಾ ಮೆಲೋಡಿಸ್ ಕರೋಕೆ ಗಾಯನ ತರಬೇತಿ ಸಂಸ್ಥೆಯ ಸದಸ್ಯರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ಹಾಗೂ ಸ್ಥಳೀಯ ಪ್ರತಿಭೆಗಳಿಂದ ನೃತ್ಯ ವೈಭವ ನಡೆಯಲಿದೆ ಎಂದು ವಿಹಾನಾ ಮೆಲೋಡಿಸ್ ಕಾರ್ಕಳ ಇದರ ನಿರ್ದೇಶಕರಾದ ಶಿವಕುಮಾರ್, ಸಹ ನಿರ್ದೇಶಕರು ಮತ್ತು ಮುಖ್ಯ ತರಬೇತುದಾರರಾದ ರಮ್ಯಾ ಸುಧೀಂದ್ರ ತಿಳಿಸಿದ್ದಾರೆ.



















