“ಸೌಹಾರ್ದತೆಗಾಗಿ ಕ್ರಿಕೆಟ್”, ಭಾರತ್ ಜೋಡೋ ಟ್ರೋಫಿ -2026
ಜ 30 – ಫೆ.1ವರೆಗೆ, ಗಾಂಧಿ ಮೈದಾನ ಕಾರ್ಕಳ

ಕಾರ್ಕಳ: “ಸೌಹಾರ್ದತೆಗಾಗಿ ಕ್ರಿಕೆಟ್” ಅನ್ನುವ ದೃಢ ಸಂಕಲ್ಪದೊಂದಿಗೆ ತಾರೀಖು ಜನವರಿ 30/31 ಫೆಬ್ರವರಿ 1 ರಂದು ಕಾರ್ಕಳದ ಗಾಂಧಿ ಮೈದಾನದಲ್ಲಿ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಕೃಷ್ಣ ಶೆಟ್ಟಿ ಬಜಗೋಳಿ ಇವರ ಮುಂದಾಳತ್ವದಲ್ಲಿ ಕಾರ್ಕಳ ನಗರ ಯುವ ಕಾಂಗ್ರೆಸ್ ಹಾಗೂ ಕಾರ್ಕಳ ಎನ್.ಎಸ್.ಯು.ಐ ಇವರ ಸಹಭಾಗಿತ್ವದಲ್ಲಿ ಲಕ್ಷಾಂತರ ಜನ ಒಂದೇ ಗುರಿಯೊಂದಿಗೆ ಭಾರತವನ್ನು ಒಗ್ಗೂಡಿಸಲು ಜೊತೆಯಾಗಿ ಹೆಜ್ಜೆ ಹಾಕಿದ, ಭಾರತ್ ಜೋಡೋ ಯಾತ್ರೆಯ ಸವಿನೆನಪಿಗಾಗಿ “ಭಾರತ್ ಜೋಡೋ ಟ್ರೊಫಿ -2026” ಕಾಂಗ್ರೆಸ್ ನಾಯಕರ ಘನ ಉಪಸ್ಥಿತಿಯಲ್ಲಿ ನಡೆಯಲಿದೆ ಎಂದು ತಂಡ ಪ್ರಕಟಣೆಯಲ್ಲಿ ತಿಳಿಸಿದೆ.



















