
ಪೆರ್ಡೂರು:ಕುಂಟಾಲ ಕಟ್ಟೆ ಮಹಾಮಾಯಿ ದೇವಿ ಗುಡಿಯಲ್ಲಿ ಉಡುಪಿ ಹೆಚ್ಚುವರಿ ಪೊಲೀಸ್ ಅಧಿಕ್ಷಕರ ಕಛೇರಿಯ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಆದ ಸಂತೋಷ್ ರವರು ಶ್ರೀ ಧರ್ಮಸ್ಥಳ ಗ್ರಾಮಭಿವೃದ್ದಿ ಯೋಜನೆಯ ಸದಸ್ಯರ ಸಭೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಹಿಳೆಯರ ಕಾನೂನು ಬಗ್ಗೆ ಸೈಬರ್ ಅಪರಾಧ ಬಗ್ಗೆ ಜಾಗರೂಕ ರಾಗುವಂತೆ ಯಾವುದೇ ಅಪರಿಚಿತರ ಕರೆ ಸಂದೇಶ ಗಳಿಗೆ ಸ್ಪಂದಿಸದಂತೆ. ಮಾದಕ ವ್ಯಸನ ಗಳ ಬಗ್ಗೆ ಶಾಲಾ ಕಾಲೇಜಿಗೆ ಹೋಗುವ ಮಕ್ಕಳ ಬಗ್ಗೆ ನಿಗಾ ವಹಿಸುವಂತೆ. ಚಿನ್ನ ಬೆಳ್ಳಿ ಪಾಲಿಶ್ ಮಾಡಲು ಮನೆಗ ಬರುವ ಅಪರಿಚಿ ತರ ಬಗ್ಗೆ ತಕ್ಷಣ 112 ನೇ ದಕ್ಕೆ ತುರ್ತು ಕರೆ ಮಾಡಿ ಮಾಹಿತಿ ನೀಡುವಂತೆ. ಸೈಬರ್ ವಂಚನೆ ಆದಲ್ಲಿ 1930 ನೇ ದಕ್ಕೆ ಕರೆ ಮಾಡುವಂತೆ
ವಾಹನ ಸವಾರಿ ಮಾಡುವ ವೇಳೆ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿಯೇ ಬೈಕ್ ಚಲಾಯಿಸುವಂತೆ. ಹಾಗೂ ಇತರ ಕಾನೂನು ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಬೈರಂಪಳ್ಳಿ ಸಿ ಒಕ್ಕೂಟದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ವಲಯ ಮೇಲ್ವಿಚಾರಕರಾದ ಮನೋರಮಾ ಹಾಗೂ ಒಕ್ಕೂಟದ ಎಲ್ಲಾ ಸಂಘದ ಸದಸ್ಯರು ಗ್ರಾಮಸ್ಥರು ಉಪಸ್ಥಿತರಿದ್ದರು. ಒಕ್ಕೂಟದ ಸೇವಾ ಪ್ರತಿನಿಧಿ ಅಶೋಕ್ ಶೆಟ್ಟಿಯವರು ಕಾರ್ಯಕ್ರಮ ನಿರೂಪಿಸಿದರು.



















