ಕ್ರೈಸ್ಟ್ ಕಿಂಗ್ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳಾದ,ಅಕ್ಷಯ ಪ್ರಭು, ಸುದೀಕ್ಷಾ ಪೂಜಾರಿ, ಅಮಿತ್ ಪ್ರಭು

ಕ್ರೈಸ್ಟ್ ಕಿಂಗ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಾದ ಅಕ್ಷಯ ಪ್ರಭು, ಅಮಿತ್ ಪ್ರಭು, ಸುದೀಕ್ಷಾ ಪೂಜಾರಿ ಇವರು ರಾಜ್ಯಮಟ್ಟದಲ್ಲಿ ಚಿನ್ನದ ಪದಕದೊಂದಿಗೆ, ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಕಾರ್ಕಳ ಕ್ರೈಸ್ಟ್ ಕಿಂಗ್ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳಾದ ಇವರು ತರಬೇತುದಾರರಾದ ಕರಾಟೆ ಕೋಚ್ ಕ್ಯೊಷಿ ಸುಧೀರ್ ಪ್ರಭು ಕೈಝಾನ್ ಇನ್ಸ್ಟಿಟ್ಯೂಟ್ ಆಫ್ ಮಾರ್ಷಲ್ ಆರ್ಟ್ಸ್ ಗಾಂಧಿ ಮೈದಾನ, ಕಾರ್ಕಳ ಇವರಿಂದ ತರಬೇತಿ ಪಡೆದಿರುತ್ತಾರೆ.
ಅಕ್ಷಯ ಪ್ರಭು,
KIO ರಾಜ್ಯ ಮಟ್ಟದ ಸೆಲೆಕ್ಷನ್ ಕರಾಟೆ ಚಾಂಪಿಯನ್ಶಿಪ್ 2026ರಲ್ಲಿ ಕಟಾ ಮತ್ತು ಕುಮಿಟೆ ವಿಭಾಗಗಳಲ್ಲಿ 2 ಚಿನ್ನದ ಪದಕಗಳನ್ನು ಗೆದ್ದು KIO ರಾಷ್ಟ್ರ ಮಟ್ಟಕ್ಕೆ 4ನೇ ಬಾರಿ ಆಯ್ಕೆಯಾಗಿದ್ದಾರೆ.
ಸುದೀಕ್ಷಾ ಪೂಜಾರಿ, ಕುಮಿಟೆಯಲ್ಲಿ ಚಿನ್ನದ ಪದಕ ಮತ್ತು ಕಟಾದಲ್ಲಿ ಕಂಚಿನ ಪದಕ ಗೆದ್ದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಅಮಿತ್ ಪ್ರಭು, ಕುಮಿಟೆಯಲ್ಲಿ ಚಿನ್ನದ ಪದಕ ಗೆದ್ದು KIO ರಾಷ್ಟ್ರ ಮಟ್ಟಕ್ಕೆ 4ನೇ ಬಾರಿ ಆಯ್ಕೆಯಾಗಿದ್ದಾರೆ.



















