
ದೆಹಲಿ: ಜನವರಿ 6 ರಂದು ಭಾರತದ ಪಶ್ಚಿಮ ಕರಾವಳಿಯಲ್ಲಿರುವ ಪ್ರಾಚೀನ ಲಕ್ಷದ್ವೀಪ ದ್ವೀಪಗಳ ಫೋಟೊ ಮತ್ತು ವಿಡಿಯೊಗಳನ್ನು ಮೋದಿ ಟ್ವೀಟ್ ಮಾಡಿದ ನಂತರ ಸಾಮಾಜಿಕ ಮಾಧ್ಯಮದಲ್ಲಿ ಮೂವರು ಮಾಲ್ಡೀವ್ಸ್ ಅಧಿಕಾರಿಗಳು ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದು ಇದರಿಂದ ಭಾರತ ಮತ್ತು ಮಾಲ್ಡಿವ್ಸ್ ನಡುವಿನ ಸಂಬಂಧ ಹದಗೆಟ್ಟ ಪರಿಣಾಮ ಅಲ್ಲಿಗೆ ಭೇಟಿ ನೀಡುವ ಭಾರತೀಯ ಪ್ರವಾಸಿಗರ ಸಂಖ್ಯೆ ಕುಸಿದಿದ್ದು, ನಮ್ಮಲ್ಲಿಗೆ ಪ್ರವಾಸಕ್ಕೆ ಬನ್ನಿ, ಆರ್ಥಿಕತೆಯನ್ನು ಬೆಂಬಲಿಸಿ ಎಂದು ಮಾಲ್ಡೀವ್ಸ್ ಪ್ರವಾಸೋದ್ಯಮ ಸಚಿವ ಇಬ್ರಾಹಿಂ ಫೈಸಲ್ ಮನವಿ ಮಾಡಿದ್ದಾರೆ.
“ನಮಗೆ ಇತಿಹಾಸವಿದೆ. ಹೊಸದಾಗಿ ಚುನಾಯಿತರಾದ ನಮ್ಮ ಸರ್ಕಾರ ಕೂಡ ಭಾರತದೊಂದಿಗೆ ಕೆಲಸ ಮಾಡಲು ಬಯಸುತ್ತದೆ. ನಾವು ಯಾವಾಗಲೂ ಶಾಂತಿ ಮತ್ತು ಸೌಹಾರ್ದ ವಾತಾವರಣವನ್ನು ಉತ್ತೇಜಿಸುತ್ತೇವೆ. ನಮ್ಮ ಜನರು ಮತ್ತು ಸರ್ಕಾರವು ಭಾರತೀಯ ಆಗಮನಕ್ಕೆ ಆತ್ಮೀಯ ಸ್ವಾಗತವನ್ನು ನೀಡುತ್ತದೆ. ಪ್ರವಾಸೋದ್ಯಮ ಸಚಿವನಾಗಿ, ದಯವಿಟ್ಟು ಮಾಲ್ಡೀವ್ಸ್‌ನ ಪ್ರವಾಸೋದ್ಯಮದ ಭಾಗವಾಗಿ ಎಂದು ನಾನು ಭಾರತೀಯರಿಗೆ ಹೇಳಲು ಬಯಸುತ್ತೇನೆ. ನಮ್ಮ ಆರ್ಥಿಕತೆಯು ಪ್ರವಾಸೋದ್ಯಮದ ಮೇಲೆ ಅವಲಂಬಿತವಾಗಿದೆ ಎಂದು ಅವರು ಹೇಳಿದ್ದಾರೆ