
ಕಾರ್ಕಳ :ಕಾರ್ಕಳ ಹಾಗೂ ಹೆಬ್ರಿ ತಾಲೂಕುಗಳನ್ನೊಳಗೊಂಡ ಕಾರ್ಕಳ ವಿಧಾನ ಸಭಾ ಕ್ಷೇತ್ರದ ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘ(ರಿ.) ರಚನೆಯಾಗಿದ್ದು ಇದರ ಅಧ್ಯಕ್ಷರಾಗಿ ನ್ಯೂಸ್ ಕಾರ್ಕಳದ ನಳಿನಿ ಎಸ್ ಸುವರ್ಣ ಆಯ್ಕೆ ಆಗಿದ್ದಾರೆ.
ಮಾಧ್ಯಮ ರಂಗದಲ್ಲಿ ಕಾರ್ಕಳದಲ್ಲಿ ಸಂಘದ ಪ್ರಥಮ ಮಹಿಳಾ ಅಧ್ಯಕ್ಷರು ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.
ಇತ್ತೀಚೆಗೆ ನಡೆದ ಸಂಘದ ಸಭೆಯಲ್ಲಿ ನೂತನ ಘಟಕದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ಗೌರವಾಧ್ಯಕ್ಷರಾಗಿ ವಾಸುದೇವ ಭಟ್(ಎನ್. ಪಿ ನ್ಯೂಸ್), ಬಾಲಕೃಷ್ಣ ಭೀಮಗುಳಿ(ಕರಾವಳಿ ನಾಡಿ)ರನ್ನು ಆಯ್ಕೆ ಮಾಡಲಾಗಿದೆ.
ಸಂಚಾಲಕರಾಗಿ ಶರತ್ ಭಟ್ ( ಮಾಧ್ಯಮ ಬಿಂಬ) ಕಾರ್ಯದರ್ಶಿಯಾಗಿ ರಂಜಿತ್ ಶಿರ್ಲಾಲು (ಮಾಧ್ಯಮ ಬಿಂಬ), ಉಪಾಧ್ಯಕ್ಷರಾಗಿ ಪ್ರಮೋದ್ ಪೈ ಮುನಿಯಾಲು ( ಸ್ವಯಂ ಟೈಮ್ಸ್ ) ಇಮ್ತಿಯಾಜ್ ಕಾರ್ಕಳ,( ಸ್ವಯಂ ಟೈಮ್ಸ್), ಕೋಶಾಧಿಕಾರಿ ಯಾಗಿ ಮಂಜೇಶ್ ಶೆಟ್ಟಿ(ನಮ್ಮ ಕಾರ್ಲ) ಹಾಗೂ ಶಶಿಕಾಂತ್ (ಸ್ವಯಂ ಟೈಮ್ಸ್), ಸಂಘಟನಾ ಕಾರ್ಯದರ್ಶಿಯಾಗಿ ಸಂಪತ್(ನಮ್ಮ ಕಾರ್ಲ), ಶರತ್ ( ನ್ಯೂಸ್ ಕಾರ್ಕಳ) ಗೌರವ ಸಲಹೆಗಾರರಾಗಿ ರಾಧಿಕಾ, ಅಬೂಬಕರ್ ಹಾಗೂ ಅವಿಲ್ ( ನಮ್ಮ ಕಾರ್ಲ), ಸಚಿನ್ ಹಾಗೂ ಅಶ್ವಿನಿ ನಂದಳಿಕೆ (ಕರಾವಳಿ ನಾಡಿ), ಹರಿ ಪ್ರಸಾದ್ (ಎನ್ ಪಿ ನ್ಯೂಸ್ )ಅವರು ಆಯ್ಕೆಯಾಗಿದ್ದಾರೆ.
ಸದಸ್ಯರಾಗಿ ಸೀತಾರಾಮ ತುಳುನಾಡ ವಾರ್ತೆ) ಸೌಮ್ಯ (ಎನ್. ಪಿ ನ್ಯೂಸ್), ನಿಶ್ಮಿತಾ ಶೆಟ್ಟಿ ( ಎನ್ ಪಿ ಲೈವ್ )ರನ್ನು ಆಯ್ಕೆ ಮಾಡಲಾಗಿದೆ.
ರಾಜ್ಯದಾದ್ಯoತ ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ಬಲವರ್ಧನೆ ಆಗುತ್ತಿದ್ದು ಈ ನಿಟ್ಟಿನಲ್ಲಿ ಎಲ್ಲರ ಸಹಕಾರ ಅಗತ್ಯ ಎಂದು ರಾಜ್ಯ ಅಧ್ಯಕ್ಷರಾದ ಜಿ ಎಂ ರಾಜಶೇಖರ್, ರಾಜ್ಯ ಕಾರ್ಯದರ್ಶಿ ವಸಂತ್ ಕುಮಾರ್ ತಿಳಿಸಿದ್ದಾರೆ.








