ಅಧ್ಯಕ್ಷರಾಗಿ ಪ್ರಶಾಂತ್ ಕುಮಾರ್ ಶೆಟ್ಟಿ, ಕಾರ್ಯಾಧ್ಯಕ್ಷರಾಗಿ ಶಿಶಿರ್ ಶೆಟ್ಟಿ

ಬೈಲೂರು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಸ್ರಿ ಬೈಲೂರು ಇಲ್ಲಿಯ ದೈಹಿಕ ಶಿಕ್ಷಣ ಶಿಕ್ಷಕರಾದ ಉದಯ ಕುಮಾರ್ ಶೆಟ್ಟಿಯವರು ಸುದೀರ್ಘ 41 ವರ್ಷ ಕಾಲ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇವೆ ಸಲ್ಲಿಸಿ ಮಾ. 31ರಂದು ನಿವೃತ್ತಿಗೊಳ್ಳಲಿರುವ ಈ ಸಂದರ್ಭದಲ್ಲಿ ಅವರ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಇದಕ್ಕಾಗಿ ರಚನೆಗೊಂಡ ಉದಯೋತ್ಸವ ಸಮಿತಿಯನ್ನು ಪುನರಚಿಸಲಾಯಿತು.
ಅಧ್ಯಕ್ಷರಾಗಿ ಪ್ರಶಾಂತ್ ಕುಮಾರ್ ಶೆಟ್ಟಿ, ಕಾರ್ಯಾಧ್ಯಕ್ಷರಾಗಿ ಶಿಶಿರ್ ಶೆಟ್ಟಿ, ಕಾರ್ಯದರ್ಶಿಯಾಗಿ ಮುಸ್ತಾಫ್, ಕೋಶಾಧಿಕಾರಿಯಾಗಿ ಮುಖ್ಯೋಪಾಧ್ಯಾಯರಾದ ವಸಂತಿ ಹೆಚ್ ಜಿ., ಮಹೇಂದ್ರ ಕಾಮತ್, ಗೌರವಾಧ್ಯಕ್ಷರಾಗಿ ಮೋಹನ್‌ದಾಸ್ ಹೆಗ್ಡೆ, ಕರುಣಾಕರ ಹೆಗ್ಡೆ, ಕಮಲಾಕ್ಷ ನಾಯಕ್, ಉದಯ ಶೆಟ್ಟಿ, ಗೌರವ ಸಲಹೆಗಾರರಾಗಿ ಸದಾನಂದ ಸಾಲಿಯಾನ್, ರಮೆಶ್ ನಾಯಕ್, ಮುನೀರ್ ಅಹಮ್ಮದ್ ಉಪಾಧ್ಯಕ್ಷರಾಗಿ ಆನಂದ ಪೂಜಾರಿ, ರಾಮದಾಸ ಶೆಟ್ಟಿ, ಸಂಚಾಲಕರಾಗಿ ಹರೀಶ್ ಆಚಾರ್ಯ, ಸಹ ಸಂಚಾಲಕರಾಗಿ ದಿನೇಶ್ ಪೂಜಾರಿ, ಆಯ್ಕೆಯಾಗಿದ್ದಾರೆ ಇದರೊಂದಿಗೆ ವಿವಿಧ ಹುದ್ದೆಗಳಿಗೆ ಶಾಲಾ ಹಳೆವಿದ್ಯಾರ್ಥಿಗಳನ್ನು ಪದಾಧಿಕಾರಿಗಳನ್ನಾಗಿ ಆಯ್ಕೆ ಮಾಡಲಾಯಿತು.
ಜ. 14ರಂದು ಶಾಲೆಯಲ್ಲಿ ನಡೆದ ಉದಯೋತ್ಸವ ಸಮಿತಿ ಸಭೆಯಲ್ಲಿ ಸಮಿತಿಯನ್ನು ಪುನರಚಿಸಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.








