ಕಾರ್ಕಳ ಬಿಜೆಪಿ ಕಚೇರಿಯಲ್ಲಿ, ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮ

ಭಾರತೀಯ ಜನತಾ ಪಾರ್ಟಿಯ ಹದಿನಾರನೇ ರಾಷ್ಟ್ರೀಯ ಅಧ್ಯಕ್ಷರಾಗಿ ರಾಂಚಿ ಮೂಲದ ಬಿಹಾರದ ಶಾಸಕ ಸಚಿವರಾಗಿ ಅನುಭವ ಹೊಂದಿರುವ ನಿತಿನ್ ನಬಿನ್ ರವರು ಅಧಿಕೃತವಾಗಿ ಇಂದು ಆಯ್ಕೆಯಾಗಿದ್ದು ಈ ಸುಸಂದರ್ಭದಲ್ಲಿ ಸಂತೋಷದ ಕ್ಷಣವನ್ನು ಕಾರ್ಕಳ ಬಿಜೆಪಿ ಪಕ್ಷದ ಕಚೇರಿಯ ಮುಂಭಾಗದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಲಾಯಿತು.
ಈ ಸಂದರ್ಭದಲ್ಲಿ ಮಂಡಲಾದ್ಯಕ್ಷ ನವೀನ್ ನಾಯಕ್, ಉಡುಪಿ ಜಿಲ್ಲಾ ಉಪಾಧ್ಯಕ್ಷ ಮಹಾವೀರ್ ಹೆಗ್ಡೆ, ತಾಲೂಕು ವಕ್ತಾರ ರವೀಂದ್ರ ಮೊಯ್ಲಿ, ಯುವ ಮೋರ್ಚಾ ರಾಜ್ಯ ಕಾರ್ಯದರ್ಶಿ ವಿಖ್ಯಾತ್ ಶೆಟ್ಟಿ, ನಗರಾದ್ಯಕ್ಷ ನಿರಂಜನ್ ಜೈನ್, ಪ್ರಧಾನ ಕಾರ್ಯದರ್ಶಿ ವಿಘ್ನೇಶ್ ,ಯುವ ಮೋರ್ಚಾ ತಾಲೂಕು ಅಧ್ಯಕ್ಷ ರಾಕೇಶ್ ಶೆಟ್ಟಿ, ಪ್ರಧಾನ ಕಾರ್ಯ ದರ್ಶಿ ಧನುಷ್ ಆಚಾರ್ಯ, ಅಮರ್ ಶೆಟ್ಟಿಗಾರ್. ಅವಿನಾಶ್ ಶೆಟ್ಟಿ. ಪುರಸಭೆಯ ಸದಸ್ಯರಾದ ಸುಮಾ ಕೇಶವ್, ಪಲ್ಲವಿ ಪ್ರವೀಣ್, ಮತ್ತು ಯುವ ಮೋರ್ಚಾದ ಪದಾಧಿಕಾರಿಗಳು ಉಪಸ್ಥಿತರಿದ್ದರು.








