ಹಿಂದೂ ಸಂಗಮ ಕಾರ್ಯಕ್ರಮಗಳ ವಿವರ

ಹಿಂದೂ ಸಂಗಮ ಆಯೋಜನಾ ಸಮಿತಿ, ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ ಇದರ ಯೋಜನೆಯಂತೆ 2026 ಇಸವಿಯ ಜನವರಿ ತಿಂಗಳ 18 ದಿನಾಂಕದಿಂದ ಪ್ರಾರಂಭಿಸಿದ ಫೆಬ್ರವರಿ ತಿಂಗಳ 1ನೇ ದಿನಾಂಕದ ವರೆಗೆ ತಾಲೂಕಿನ 10 ಕಡೆಗಳಲ್ಲಿ ಹಿಂದೂ ಸಂಗಮ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಸಾಮಾಜಿಕ ಸೇವಾ, ಸಹಕಾರ, ಸ್ವಾವಲಂಬನೆ ವೃದ್ಧಿಸುವ ಸಲುವಾಗಿ ಸಮಾಜದ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ, ಸೇವಾ, ಕ್ರೀಡಾ, ಕಲಾ, ಸಹಕಾರಿ ಇತ್ಯಾದಿ ಎಲ್ಲಾ ಪ್ರಕಾರದ ಸ್ವಯಂ ಸೇವಾ ಸಂಸ್ಥೆಗಳು ಮತ್ತು ಸಂಘಟನೆಗಳ ಸಹಯೋಗದಲ್ಲಿ ಈ ಕಾರ್ಯಕ್ರಮಗಳು ನಡೆಯಲಿವೆ. ಕೌಟುಂಬಿಕ ಮೌಲ್ಯಗಳ ಪುನರುತ್ಥಾನ, ಸಾಮಾಜಿಕ ಸಾಮರಸ್ಯದ ಜಾಗರಣ, ಪರಿಸರ ಸಂರಕ್ಷಣೆಯ ಸಂಕಲ್ಪ, ಸ್ವಾವಲಂಬಿ ಹಾಗೂ ಸ್ವಾಭಿಮಾನಿ ಜೀವನ ಪದ್ಧತಿ ಮತ್ತು ನಾಗರೀಕ ಕರ್ತವ್ಯಗಳ ಪಾಲನೆಯ ಅನುಷ್ಠಾನದಂತಹ ಆದರ್ಶಗಳ ಅಡಿಯಲ್ಲಿ ಸಮಾಜಕ್ಕಾಗಿ ಸಂಘಟಿತವಾಗಿ ಸ್ಥಳೀಯ ಸಮಾಜವೇ ನಡೆಸುವ ಕಾರ್ಯಕ್ರಮಗಳು ಆಗಲಿವೆ.ಸರ್ವರೂ ಭಾಗವಹಿಸಿ ಈ ಕಾರ್ಯಕ್ರಮಗಳನ್ನು ಯಶಸ್ವಿಯಾಗೊಳಿಸಬೇಕೆಂದು ಆಯೋಜನಾ ಸಮಿತಿಯು ವಿನಂತಿಸಿಕೊಳ್ಳುತ್ತಿದೆ.
ಹಿಂದೂ ಸಂಗಮ ಕಾರ್ಯಕ್ರಮಗಳು ಈ ಕೆಳಗಿನಂತಿವೆ.




















