
ದಾವಣಗೆರೆ: ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ ಹರಿಹರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಬಿಜೆಪಿಗೆ ಮರಳುವಂತೆ ಕಾರ್ಯಕರ್ತರಿಂದಲೂ ಒತ್ತಾಯವಿದ್ದು ನನ್ನ ಮನಸ್ಸಿನಲ್ಲೂ ಅದೇ ಇದೆ ಎಂದು ಹೇಳಿದ್ದಾರೆ.
ನನ್ನ ಕುತ್ತಿಗೆ ಕೊಯ್ದರೂ ಹಿಂದುತ್ವ, ಬಿಜೆಪಿ ಬಿಟ್ಟು ಬೇರೆ ಕಡೆ ಹೋಗೋದಿಲ್ಲ. ಪಕ್ಷದಲ್ಲಿ ಪರಿವರ್ತನೆ ಆಗಬೇಕು ಅಂತಾನೆ ನಾನು ಹೊರಗೆ ಬಂದಿದ್ದೇನೆ. ಈಗಾಗಲೇ ಸಾಕಷ್ಟು ಬಿಜೆಪಿ ಕಾರ್ಯಕರ್ತರು ಪಕ್ಷದಲ್ಲಿ ನೋವು ಅನುಭವಿಸುತ್ತಿದ್ದು ಇವತ್ತಲ್ಲ ನಾಳೆ ಪಕ್ಷವೂ ಒಳ್ಳೆಯ ಸ್ಥಿತಿಗೆ ಬರುತ್ತದೆ. ಕಾಂಗ್ರೆಸ್ ನವರಿಗೆ ಮೈ ಮೇಲೆ ಜ್ಞಾನವೇ ಇಲ್ಲ. ತಮ್ಮದೇ ಸರ್ಕಾರ ಇದೆ ಎಂದು ಮನಸ್ಸಿಗೆ ಬಂದಂತಲ್ಲ ಆಡುತ್ತಿದ್ದು ಅಧಿಕಾರದ ಮದ ಹೆಚ್ಚಾದಾಗಲೆಲ್ಲ ಈ ರೀತಿ ಮಾಡುತ್ತಾರೆ.
ರಾಜ್ಯದಲ್ಲಿ ಯಾವುದೇ ಮಹಿಳೆಯರಿಗೂ ಭದ್ರತೆ ಇಲ್ಲ. ಸರ್ಕಾರದ ಭಾಗವೇ ಆಗಿರುವ ಮಹಿಳಾ ಅಧಿಕಾರಿಗಳಿಗೂ ಭದ್ರತೆ ಇಲ್ಲದಂತಾಗಿದ್ದು ಗೃಹ ಮಂತ್ರಿಗಳಿಗೆ ಈ ವಿಚಾರ ಹೇಳಿದರೆ ‘ಇದು ಎಲ್ಲಾ ಸಣ್ಣ ವಿಚಾರ ಬಿಡಿ’ ಅಂತಾರೆ ಎಂದು ಹಗುರವಾಗಿ ಮಾತನಾಡುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.



















