30.1 C
Udupi
Sunday, March 1, 2026
spot_img
spot_img
HomeBlogಸ್ವಚ್ಛ ಕಾರ್ಕಳ ಬ್ರಿಗೇಡ್ ಹಾಗೂ ಕಾರ್ಕಳ ಟೈಗರ್ಸ್ ಜಂಟಿ ಆಶ್ರಯದಲ್ಲಿ, ಸ್ವಚ್ಛತಾ ಅಭಿಯಾನ

ಸ್ವಚ್ಛ ಕಾರ್ಕಳ ಬ್ರಿಗೇಡ್ ಹಾಗೂ ಕಾರ್ಕಳ ಟೈಗರ್ಸ್ ಜಂಟಿ ಆಶ್ರಯದಲ್ಲಿ, ಸ್ವಚ್ಛತಾ ಅಭಿಯಾನ

ಹೆಚ್ಚಿನ ಸಾರ್ವ­­ಜನಿಕ ಪ್ರದೇಶಗಳಲ್ಲಿ ಕೊಳೆ, ಕಸ­ಗಳನ್ನು ನೋಡಿ ತಾವೇನೂ ಮಾಡ­ಲಾ­ಗದೇ, ಅವು­ಗಳಿಗೆ ಅನಿವಾರ್ಯವಾಗಿ ಹೊಂದಿ­ಕೊಂಡಂತಿದ್ದ ಬಹ­ಳಷ್ಟು ಜನರಲ್ಲಿ ಆಶಾ­ಭಾವನೆಗಳು ಚಿಗುರೊಡೆದಿವೆ.

ಈ ನಿಟ್ಟಿನಲ್ಲಿ ಸ್ವಚ್ಛ ಕಾರ್ಕಳ ಬ್ರಿಗೇಡ್ ಹಾಗೂ ಕಾರ್ಕಳ ಟೈಗರ್ಸ್ ಜಂಟಿ ಆಶ್ರಯದಲ್ಲಿ ದಿನಾಂಕ 01, ಮಾರ್ಚ್, 2026ರ ಭಾನುವಾರ ಬೆಳಗ್ಗೆ 6:30 ಇಂದ 8:30 ಘಂಟೆಯ ವರೆಗೆ ಇಂದ್ರಪ್ರಸ್ಥದಿಂದ – ಕಾಬೆಟ್ಟು ಶಾಲೆ ರಸ್ತೆ ತನಕ ಸುತ್ತಮುತ್ತ ಪರಿಸರವನ್ನು ಸ್ವಚ್ಛ ಮಾಡಲಾಯಿತು.

ಸುಮಾರು 25 ಜನರ ಸ್ವಯಂಸೇವಕರ ಸಹಯೋಗದೊಂದಿಗೆ
25 ಗೋಣಿಚೀಲ ಪ್ಲಾಸ್ಟಿಕ್ ಕಸಗಳು,
3 ಗೋಣಿಚೀಲ ಬಿಯರ್ ಹಾಗೂ ಇನ್ನಿತರ ಗಾಜಿನ ಬಾಟಲಿಗಳು,
2 ಗೋಣಿಚೀಲ ಹಳೇ ಚಪ್ಪಲಿಗಳು ಹಾಗೂ
ಇನ್ನಿತರ ಕಸಗಳ ಒಟ್ಟು 30 ಗೋಣಿಚೀಲಗಳಾಗುವಷ್ಟು ಕಸಗಳನ್ನು ವಿಲೇವಾರಿ ಮಾಡಲಾಯಿತು.

ಈ ಅಭಿಯಾನವು ಸಾರ್ವಜನಿಕರಲ್ಲಿ ನೈರ್ಮಲ್ಯದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಸಮುದಾಯದ ಭಾಗವಹಿಸುವಿಕೆಯನ್ನು ಉತ್ತೇಜಿಸಲು “ಸ್ವಚ್ಛತೆಯೇ ಸೇವೆ” (Swachhata Hi Seva) ಮುಂತಾದ ವಿಶೇಷ ಅಭಿಯಾನಗಳನ್ನು ನಡೆಸುತ್ತಾ ಬಂದಿದೆ.

ಸ್ವಚ್ಛ ಕಾರ್ಕಳ ಬ್ರಿಗೇಡ್ ತಂಡದೊಂದಿಗೆ, ಕಾರ್ಕಳ ಟೈಗರ್ಸ್ ತಂಡವು ಸ್ವಯಂಪ್ರೇರಿತವಾಗಿ ಹಲವು ಬಾರಿ ಸ್ವಚ್ಛತಾ ಅಭಿಯಾನ ನಡೆಸುತ್ತಾ ಬಂದಿದೆ.

spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page