22.1 C
Udupi
Sunday, February 1, 2026
spot_img
spot_img
HomeBlogಭಾರತೀಯ ನೌಕಾಪಡೆಯಲ್ಲಿ 260 SSC ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ: ಫೆ.24ರವರೆಗೆ ಅರ್ಜಿ ಸಲ್ಲಿಸಲು ಅವಕಾಶ

ಭಾರತೀಯ ನೌಕಾಪಡೆಯಲ್ಲಿ 260 SSC ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ: ಫೆ.24ರವರೆಗೆ ಅರ್ಜಿ ಸಲ್ಲಿಸಲು ಅವಕಾಶ

ನವದೆಹಲಿ: ನವದೆಹಲಿ: ಭಾರತೀಯ ನೌಕಾ ಅಕಾಡೆಮಿ ಶಾರ್ಟ್ ಸರ್ವಿಸ್ ಕಮಿಷನ್ (SSC) ಆಫೀಸರ್ ಕೋರ್ಸ್‌ಗೆ ಅರ್ಹ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಈ ನೇಮಕಾತಿಯ ಮೂಲಕ ಒಟ್ಟು 260 SSC ಅಧಿಕಾರಿಗಳ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಆಸಕ್ತ ಅಭ್ಯರ್ಥಿಗಳು ಫೆಬ್ರವರಿ 24ರೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಈ ನೇಮಕಾತಿಯಲ್ಲಿ ಕಾರ್ಯನಿರ್ವಾಹಕ ಶಾಖೆ (ಜಿಎಸ್ (ಎಕ್ಸ್) / ಹೈಡ್ರೊ ಕೇಡರ್)ಕ್ಕೆ 76, ಪೈಲಟ್ ವಿಭಾಗಕ್ಕೆ 25, ನೌಕಾ ವಾಯು ಕಾರ್ಯಾಚರಣೆ ಅಧಿಕಾರಿ (ವೀಕ್ಷಕ) ಹುದ್ದೆಗೆ 20, ಏರ್ ಟ್ರಾಫಿಕ್ ಕಂಟ್ರೋಲರ್‌ಗೆ 18, ಲಾಜಿಸ್ಟಿಕ್ಸ್‌ ಹುದ್ದೆಗೆ 10 ಹಾಗೂ ಶಿಕ್ಷಣ ಶಾಖೆಗೆ 7 ಹುದ್ದೆಗಳು ಮೀಸಲಾಗಿವೆ. ಇನ್ನು ಎಂಜಿನಿಯರಿಂಗ್ ಶಾಖೆ (ಸಾಮಾನ್ಯ ಸೇವೆ)ಯಲ್ಲಿ 42, ಸಬ್‌ಮೆರಿನ್ ಟೆಕ್ ಎಂಜಿನಿಯರಿಂಗ್‌ನಲ್ಲಿ 8, ವಿದ್ಯುತ್ ಶಾಖೆ (ಸಾಮಾನ್ಯ ಸೇವೆ)ಯಲ್ಲಿ 38 ಮತ್ತು ಸಬ್‌ಮೆರಿನ್ ಟೆಕ್ ಎಲೆಕ್ಟ್ರಿಕಲ್ ವಿಭಾಗದಲ್ಲಿ 8 ಹುದ್ದೆಗಳಿವೆ.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಂಬಂಧಿತ ವಿಭಾಗದಲ್ಲಿ ಕನಿಷ್ಠ ಶೇ.60 ಅಂಕಗಳೊಂದಿಗೆ ಬಿಎಸ್ಸಿ, ಬಿಕಾಂ, ಬಿಇ, ಬಿಟೆಕ್, ಎಂಇ, ಎಂಟೆಕ್, ಎಂಬಿಎ, ಎಂಸಿಎ, ಪಿಜಿ, ಪಿಜಿ ಡಿಪ್ಲೊಮಾ ಅಥವಾ ತತ್ಸಮಾನ ಪದವಿಯನ್ನು ಪಡೆದಿರಬೇಕು. ಜೊತೆಗೆ ಅಧಿಸೂಚನೆಯಲ್ಲಿ ತಿಳಿಸಿರುವಂತೆ ನಿರ್ದಿಷ್ಟ ವಯೋಮಿತಿ, ದೈಹಿಕ ಹಾಗೂ ವೈದ್ಯಕೀಯ ಮಾನದಂಡಗಳನ್ನು ಪೂರೈಸಿರಬೇಕು.

ಅಂತಿಮ ಆಯ್ಕೆಯು ಅಭ್ಯರ್ಥಿಗಳ ಶೈಕ್ಷಣಿಕ ಅಂಕಗಳು, ಎಸ್‌ಎಸ್‌ಬಿ ಸಂದರ್ಶನ ಹಾಗೂ ದಾಖಲೆಗಳ ಪರಿಶೀಲನೆ ಸೇರಿದಂತೆ ವಿವಿಧ ಹಂತಗಳನ್ನು ಒಳಗೊಂಡಿರುತ್ತದೆ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಕೇರಳದ ಎಜಿಮಲದಲ್ಲಿರುವ ಭಾರತೀಯ ನೌಕಾ ಅಕಾಡೆಮಿ (ಐಎನ್‌ಎ)ಯಲ್ಲಿ ತರಬೇತಿ ನೀಡಲಾಗುತ್ತದೆ. ತರಬೇತಿ ಪೂರ್ಣಗೊಂಡ ನಂತರ ಅವರನ್ನು ಭಾರತೀಯ ನೌಕಾ ದಳದಲ್ಲಿ ಅಧಿಕಾರಿ ಹುದ್ದೆಗಳಿಗೆ ನಿಯೋಜಿಸಿ ಈ ಹುದ್ದೆಗಳಿಗೆ ಪ್ರಾರಂಭಿಕ ವೇತನವು ತಿಂಗಳಿಗೆ ಸುಮಾರು ರೂ.1,25,000 ರಿಂದ ಆರಂಭವಾಗುತ್ತದೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page