22.1 C
Udupi
Sunday, February 1, 2026
spot_img
spot_img
HomeBlogಇರಾನ್ ಜೊತೆ ವ್ಯವಹಾರ ನಡೆಸುವ ದೇಶಗಳ ಮೇಲೆ ಹೆಚ್ಚುವರಿಯಾಗಿ ಶೇ.25 ರಷ್ಟು ಸುಂಕ ವಿಧಿಸುವುದಾಗಿ ಘೋಷಣೆ...

ಇರಾನ್ ಜೊತೆ ವ್ಯವಹಾರ ನಡೆಸುವ ದೇಶಗಳ ಮೇಲೆ ಹೆಚ್ಚುವರಿಯಾಗಿ ಶೇ.25 ರಷ್ಟು ಸುಂಕ ವಿಧಿಸುವುದಾಗಿ ಘೋಷಣೆ ಮಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ನ್ಯೂಯಾರ್ಕ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೆರಿಗೆ ಸುಲಿಗೆ ಮುಂದುವರೆದಿದ್ದು ಇದೀಗ ಇರಾನ್ ಜೊತೆ ವ್ಯವಹಾರ ನಡೆಸುವ ದೇಶಗಳ ಮೇಲೆ ಹೆಚ್ಚುವರಿಯಾಗಿ ಶೇ.25 ರಷ್ಟು ಸುಂಕ ವಿಧಿಸುವುದಾಗಿ ಘೋಷಿಸಿದ್ದಾರೆ.

ಈ ಕುರಿತು ಸೋಮವಾರ ರಾತ್ರಿ ಟ್ರುತ್ ಸೋಶಿಯಲ್ ನಲ್ಲಿ ಪೋಸ್ಟ್ ಮಾಡಿದ ಟ್ರಂಪ್ ಈ ನಿರ್ಧಾರ ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ತಿಳಿಸಿದ್ದಾರೆ. ಶ್ವೇತಭವನವು ಈ ಸುಂಕಗಳ ಕುರಿತು ಅಧಿಕೃತ ದಾಖಲೆಯನ್ನು ಬಿಡುಗಡೆ ಮಾಡಿಲ್ಲವಾದರೂ, ಇರಾನ್‌ನಲ್ಲಿ 600 ಕ್ಕೂ ಹೆಚ್ಚು ಜನರು ಸಾವನ್ನಪ್ಪಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳು ನಡೆಯುತ್ತಿರುವ ಸಮಯದಲ್ಲಿ ಈ ನಿರ್ಧಾರ ಬಂದಿದೆ. ಮತ್ತೊಂದೆಡೆ, ಇರಾನ್‌ನ ಕರೆನ್ಸಿ ರಿಯಾಲ್‌ನ ಮೌಲ್ಯವು ಈಗ ಬಹುತೇಕ ಶೂನ್ಯವನ್ನು ತಲುಪಿದೆ. ಭಾರತೀಯ ಕರೆನ್ಸಿಯಲ್ಲಿ, 1 ರಿಯಾಲ್‌ನ ಮೌಲ್ಯ ಕೇವಲ ₹0.000079 ಆಗಿದೆ.

ರಾಯಿಟರ್ಸ್ ವರದಿಯ ಪ್ರಕಾರ, ಇರಾನ್‌ನೊಂದಿಗೆ ವ್ಯಾಪಾರ ಮಾಡುವ ಪ್ರಮುಖ ದೇಶಗಳಲ್ಲಿ ಚೀನಾ, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಭಾರತ ಸೇರಿವೆ. ಅಮೆರಿಕ ಈಗಾಗಲೇ ಭಾರತದ ಮೇಲೆ ಶೇ.50 ರಷ್ಟು ಸುಂಕ ವಿಧಿಸಿದ್ದು ಇದರಲ್ಲಿ ಶೇ.25 ರಷ್ಟು ಪರಸ್ಪರ ಸುಂಕ ಮತ್ತು ರಷ್ಯಾದಿಂದ ತೈಲ ಆಮದುಗಳ ಮೇಲೆ ಶೇ.25 ರಷ್ಟು ಸುಂಕ ಸೇರಿದೆ. ಇರಾನ್ ಜೊತೆಗಿನ ವ್ಯಾಪಾರಕ್ಕಾಗಿ ಭಾರತದ ಮೇಲೆ ಸುಂಕ ವಿಧಿಸಿದರೆ, ಒಟ್ಟು ಸುಂಕ ಶೇ.75 ರಷ್ಟು ತಲುಪುತ್ತದೆ. ಭಾರತದ ರಫ್ತುಗಳ ಮೇಲೆ ಪರಿಣಾಮ ಬೀರುತ್ತಿರುವ ಸುಂಕಗಳಿಂದಾಗಿ ಭಾರತವು ಅಮೆರಿಕದಲ್ಲಿ ತನ್ನ ಸರಕುಗಳನ್ನು ಮಾರಾಟ ಮಾಡುವಲ್ಲಿ ತೊಂದರೆಗಳನ್ನು ಎದುರಿಸುತ್ತಿದೆ.

ಅಮೆರಿಕದ ಸುಪ್ರೀಂ ಕೋರ್ಟ್ ಟ್ರಂಪ್ ಅವರ ಸುಂಕ ವಿಧಿಸುವ ಅಧಿಕಾರದ ಕುರಿತು ನಾಳೆ ತೀರ್ಪು ನೀಡುವ ನಿರೀಕ್ಷೆಯಿದ್ದು ಈ ನಿರ್ಧಾರದ ಬಗ್ಗೆ ಟ್ರಂಪ್ ಕಳವಳ ವ್ಯಕ್ತಪಡಿಸಿದ್ದಾರೆ. ನ್ಯಾಯಾಲಯವು ಸುಂಕಗಳನ್ನು ವಿಧಿಸುವ ತನ್ನ ಅಧಿಕಾರವನ್ನು ಮಿತಿಗೊಳಿಸಿದರೆ, ಅಮೆರಿಕವು ಭಾರಿ ಆರ್ಥಿಕ ಬಿಕ್ಕಟ್ಟನ್ನು ಎದುರಿಸಬಹುದು ಮತ್ತು ಈಗಾಗಲೇ ವಿಧಿಸಲಾದ ಸುಂಕಗಳನ್ನು ಹಿಂದಿರುಗಿಸುವುದು ಅಸಾಧ್ಯ ಎಂದು ಟ್ರಂಪ್ ಸೋಮವಾರ ತಮ್ಮ ಸೋಶಿಯಲ್‌ ಮೀಡಿಯಾ ಟ್ರೂತ್ ಸೋಶಿಯಲ್‌ನಲ್ಲಿ ಬರೆದು ಹಂಚಿಕೊಂಡಿದ್ದಾರೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page