
ಬಗೋಟಾ: ಕೆಲ ದಿನಗಳ ಹಿಂದೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಡ್ರಗ್ಸ್ ಭಯೋತ್ಪಾದನೆ ನಿಲ್ಲಿಸದಿದ್ದರೆ ವೆನಿಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೋ ಅವರಿಗಾದ ಗತಿಯೇ ಕೊಲಂಬಿಯಾ ಅಧ್ಯಕ್ಷರಿಗೂ ಬರಬಹುದು ಎಂಬ ಎಚ್ಚರಿಕೆ ನೀಡಿದ್ದು ಇದಕ್ಕೆ ಪ್ರತಿಕ್ರಿಯಿಸಿದ ಕೊಲಂಬಿಯಾ ಅಧ್ಯಕ್ಷ ಗುಸ್ತಾವೊ ಪೆಟ್ರೋ ಬನ್ನಿ ನನ್ನನ್ನು ಹಿಡಿದುಕೊಂಡು ಹೋಗಿ. ನಿಮಗಾಗಿಯೇ ಇಲ್ಲಿ ಕಾಯುತ್ತಿದ್ದೇನೆ ಎಂದು ನೇರಾನೇರ ಸವಾಲೆಸೆದಿದ್ದಾರೆ.
ಮಂಗಳವಾರ ಪೆಟ್ರೋ ಮಡುರೋ ದಂಪತಿಯನ್ನು ಸೆರೆಹಿಡಿದ ಅಮೆರಿಕದ ಕ್ರಮವನ್ನು ಖಂಡಿಸಿ ‘ಅಮೆರಿಕ ಬಾಂಬ್ ಹಾಕಿದರೆ, ನಮ್ಮ ರೈತರು ಬೆಟ್ಟಗಳಲ್ಲಿ ಸಾವಿರಾರು ಗೆರಿಲ್ಲಾ ಯೋಧರಾಗಿ ಮಾರ್ಪಡುತ್ತಾರೆ. ನಮ್ಮ ದೇಶದ ದೊಡ್ಡ ಭಾಗದ ಜನರು ಪ್ರೀತಿಸುವ ಮತ್ತು ಗೌರವಿಸುವ ಅಧ್ಯಕ್ಷರನ್ನು ಬಂಧಿಸಿದರೆ, ಅದು ಜನರ ‘ಜಾಗ್ವಾರ್’ ಅನ್ನು (ಉಗ್ರ ಕ್ರೋಧವನ್ನು) ಬಿಡುಗಡೆ ಮಾಡುತ್ತದೆ. ನಾನು ಆಯುಧ ಮುಟ್ಟುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದೆ. ಆದರೆ ತಾಯ್ನಾಡಿಗಾಗಿ ಮತ್ತೆ ಆಯುಧವನ್ನು ಹಿಡಿಯುತ್ತೇನೆ. ಬನ್ನಿ, ನನ್ನನ್ನು ಹಿಡಿದುಕೊಂಡು ಹೋಗಿ. ನಿಮಗಾಗಿಯೇ ಕಾಯುತ್ತಾ ಕುಳಿತಿದ್ದೇನೆ’ ಎಂದು ಟ್ರಂಪ್‌ಗೆ ತಿರುಗೇಟು ನೀಡಿದ್ದಾರೆ.






