
ಕಾರ್ಕಳ : ಜೆಸಿಐ ಭಾರತ, ವರ್ಷದಲ್ಲಿ ಅತ್ಯಂತ ಹೆಚ್ಚು ಮಾಧ್ಯಮದ ಪ್ರಕಟಣೆಗಳನ್ನು ನೀಡಿ ಸಂಸ್ಥೆಯ ಬ್ರಾಂಡಿಂಗ್ ಹೆಚ್ಚಿಸಿದ ಸಲುವಾಗಿ ರಾಷ್ಟ್ರಮಟ್ಟದ ಮನ್ನಣೆಗೆ ವಲಯ 15 ಜೆಸಿಐ ಕಾರ್ಕಳ ಭಾಜನವಾಗಿದೆ.
ಇದರಲ್ಲಿ ವೆಬ್ಸೈಟ್ ಪ್ರಕಟಣೆಗಳು, ಟಿವಿ ವಾಹಿನಿಯ ವಾರ್ತಾ ಪ್ರಕಟಣೆ, ಸಾಮಾಜಿಕ ಜಾಲತಾಣಗಳಲ್ಲಿ ಜೆಸಿಐ ಸಂಸ್ಥೆಯ ಕುರಿತು ನೀಡಿದ ಪ್ರಚಾರಕ್ಕಾಗಿ ಸಾರ್ವಜನಿಕ ಸಂಪರ್ಕ ಹಾಗೂ ಮಾರ್ಕೆಟಿಂಗ್ ವಿಭಾಗದಿಂದ ಈ ಮನ್ನಣೆ ದೊರಕಿದೆ. ವಲಯ ಅಧ್ಯಕ್ಷ ಅಭಿಲಾಷ್ ಬಿ. ಎ ಹಾಗೂ ವಲಯ ನಿರ್ದೇಶಕರಾದ ರಾಕೇಶ್ ಹೊಸಬೆಟ್ಟು ಜೇಸಿಐ ಕಾರ್ಕಳದ ಅಧ್ಯಕ್ಷರಾದ ಶ್ವೇತಾ ಎಸ್ ಜೈನ್ ಅವರಿಗೆ ಅಭಿನಂದನೆಯನ್ನು ತಿಳಿಸಿದರು.





