28.2 C
Udupi
Wednesday, December 31, 2025
spot_img
spot_img
HomeBlogಕಂಬಳದಲ್ಲಿ ಗುಣಪಾಲ ಕಡಂಬರ ಅವಹೇಳನ ಖಂಡನೀಯ : ಶುಭದರಾವ್

ಕಂಬಳದಲ್ಲಿ ಗುಣಪಾಲ ಕಡಂಬರ ಅವಹೇಳನ ಖಂಡನೀಯ : ಶುಭದರಾವ್

ಇತೀಚಿಗೆ ನಡೆದ ಮಂಗಳೂರು ಕಂಬಳದಲ್ಲಿ ಕಂಬಳ ಬೀಷ್ಮ ಎಂದೇ ಕರೆಯಲ್ಪಡುವ ಗುಣಪಾಲ ಕಡಂಬರನ್ನು ಕಂಬಳದ ವೇದಿಕೆಯಲ್ಲಿ ವ್ಯಕ್ತಿಯೊರ್ವರು ಸಾರ್ವಜನಿಕವಾಗಿ ಅವಹೇಳ ಮಾಡಿರುವುದನ್ನು ತೀವ್ರವಾಗಿ ಖಂಡಿಸುತ್ತೇನೆ ಮತ್ತು ಆ ವ್ಯಕ್ತಿಯು ತಕ್ಷಣ ಕ್ಷಮೆ ಯಾಚಿಸುವಂತೆ ಆಗ್ರಹಿಸುತ್ತೇನೆ ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದರಾವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಂಬಳ‌ ಕ್ಷೇತ್ರಕ್ಕೆ ಗುಣಪಾಲ ಕಡಂಬರ ಕೊಡುಗೆ ಅಪಾರ ಕಂಬಳಕ್ಕಾಗಿ ತನ್ನ ಬದುಕನ್ನೆ ಮುಡುಪಾಗಿಟ್ಟ ಶ್ರೇಷ್ಠ ವ್ಯಕ್ತಿ, ಅವರ ಗಟ್ಟಿ ನಿರ್ಧಾರಗಳಿಂದ ಕಂಬಳದಲ್ಲಿ ಶಿಸ್ತು ಪಾಲನೆಯಾಗುತಿದೆ, ಕಂಬಳದ ಬೆಳವಣಿಗೆಗೆ ಅಕಾಡೆಮಿಯನ್ನು ಪ್ರಾರಂಬಿಸಿ‌ ಅನೇಕ‌ ಉದಯೋನ್ಮುಖ ಓಟಗಾರು ಮತ್ತು ಪರಿಚಾರಕರು ಬೆಳೆಯಲು ಕಾರಣರಾದರು, ಅನೇಕ ಹೊಸ ಕಂಬಳಗ ಪ್ರಾರಂಭಕ್ಕೂ ಅವರು ಕಾರಣಕರ್ತರಾಗಿದ್ದಾರೆ.

ಕಂಬಳದಲ್ಲಿ ಗುಣಪಾಲ ಕಡಂಬರ ಧ್ವನಿಯೇ ಒಂದು ವಿಶೇಷ ಆಕರ್ಷಣೆಯಾಗಿದೆ ಅವರ ಧ್ವನಿಯಲ್ಲಿ ಕಂಬಳದ ಇತಿಹಾಸವನ್ನು ಕೇಳಲು ಸಾವಿರಾರು ಕಂಬಳ ಅಭಿಮಾನಿಗಳು ನಿರೀಕ್ಷೆಯಲ್ಲಿರುತ್ತಾರೆ ಅಂತಹ ವ್ಯಕ್ತಿಯ ಧ್ವನಿ ಅಡಗಿಸಲು‌ ಯಾರಿಂದಲೂ ಸಾದ್ಯವಿಲ್ಲ ಕಡಂಬರ ಜೊತೆ ಲಕ್ಷಾಂತರ ಕಂಬಳ ಅಭಿಮಾನಿಗಳು ಇದೇವೆ ಅವಮಾನ ಮಾಡಿದ ವ್ಯಕ್ತಿಯನ್ನು ಕಂಬಳ ಕೂಟಕ್ಕೆ ಬಹಿಷ್ಕರಿಸಬೇಕು ಎಂದು ಶುಭದರಾವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page