
ದಿನಾಂಕ 29.12.2025 ರಂದು ಕಾರ್ಕಳ ಪುರಸಭೆಯ ಮಾಜಿ ಅಧ್ಯಕ್ಷರಾದ ಶ್ರೀಮತಿ ಪ್ರತಿಮಾ ರಾಣೆ ರವರ ಸಹಯೋಗದೊಂದಿಗೆ ಉಚ್ಚಂಗಿ ಲಯನ್ಸ್ ಕ್ಲಬ್, ಮಾರ್ಕೆಟ್ ಹತ್ತಿರ ಕಾರ್ಕಳ ಈ ಸ್ಥಳದಲ್ಲಿ ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯಡಿ ಆಯೋಜಿಸಲಾದ ನೋಂದಣಿ ಕ್ಯಾಂಪ್ ನಲ್ಲಿ ಕಾರ್ಕಳದ ಕಾರ್ಮಿಕ ನಿರೀಕ್ಷಕರಾದ ಸಿ.ಎಚ್ ನವೀನ್ ರವರು ಭಾಗವಹಿಸಿ ಯೋಜನೆಯ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ ನೊಂದಾಯಿತರಾದವರಿಗೆ ಸಾಂಕೇತಿಕವಾಗಿ ಗುರುತಿನ ಚೀಟಿಯನ್ನು ವಿತರಿಸಿದರು.
ಕಾರ್ಮಿಕ ಇಲಾಖೆಯ ಸಿಬ್ಬಂದಿಗಳಾದ ಪ್ರಶಾಂತ್, ನಾರಾಯಣ ಮತ್ತು ಸಂಗಯ್ಯ ಹಿರೇಮಠ ರವರುಗಳಿಂದ ಮೀನುಗಾರಿಕೆ, ಮನೆ ಕೆಲಸದವರು, ಟೈಲರ್, ಬೀದಿ ಬದಿ ವ್ಯಾಪಾರಿಗಳು ಒಟ್ಟು ಸೇರಿ 62 ಅಸಂಘಟಿತ ಕಾರ್ಮಿಕರನ್ನು https://ksuwssb.karnataka.gov.in/ ಆನ್ಲೈನ್ ನಲ್ಲಿ ನೋಂದಾಯಿಸಿದರು.





