27.6 C
Udupi
Sunday, December 28, 2025
spot_img
spot_img
HomeBlogಜ.1ರಿಂದ ಎಲ್ಲಾ ಬೈಕ್ -ಸ್ಕೂಟರ್‌ಗೆ ಎಬಿಎಸ್ ಬ್ರೇಕ್, 2 ಹೆಲ್ಮೆಟ್ ಕಡ್ಡಾಯ

ಜ.1ರಿಂದ ಎಲ್ಲಾ ಬೈಕ್ -ಸ್ಕೂಟರ್‌ಗೆ ಎಬಿಎಸ್ ಬ್ರೇಕ್, 2 ಹೆಲ್ಮೆಟ್ ಕಡ್ಡಾಯ

ಇದೀಗ ಹೊಸ ವರ್ಷಕ್ಕೆ ಸುರಕ್ಷತಾ ದೃಷ್ಟಿಯಿಂದ ಮೋಟಾರು ವಾಹನ ನಿಯಮ ಬಿಗಿಯಾಗಿದ್ದು ಜ.1ರಿಂದ ಎಲ್ಲಾ ಬೈಕ್-ಸ್ಕೂಟರ್‌ಗೆ ಎಬಿಎಸ್ ಬ್ರೇಕ್, 2 ಹೆಲ್ಮೆಟ್ ಕಡ್ಡಾಯ ಸೇರಿದಂತೆ ಹಲವು ನಿಮಯಗಳು ಬರಲಿದೆ.

ಇದುವರೆಗೆ 125 ಸಿಸಿ ಮೇಲ್ಪಟ್ಟ ಬೈಕ್‌ ಹಾಗೂ ಸ್ಕೂಟರ್ ಎಲ್ಲಾ ಬೈಕ್‌ಗೆ ಎಬಿಎಸ್ ಕಡ್ಡಾಯ ಮಾಡಲಾಗಿದೆ. 125 ಸಿಸಿ ಒಳಗಿನ ಬೈಕ್ ಕಾಂಬಿ ಬ್ರೇಕ್ ಸಿಸ್ಟಮ್ ಕಡ್ಡಾಯ ಮಾಡಲಾಗಿತ್ತು. ಆದರೆ ಸುರಕ್ಷತಾ ದೃಷ್ಟಿಯಿಂದ 2026ರ ಜನವರಿ 1ರಿಂದ ಎಷ್ಟೇ ಸಿಸಿ, ಯಾವುದೇ ಬೈಕ್ ಅಥವಾ ಸ್ಕೂಟರ್ ಇರಲಿ ಎಬಿಎಸ್ ಬ್ರೇಕ್ ಕಡ್ಡಾಯ ಮಾಡಲಾಗಿದೆ. 2026ರಿಂದ ಮಾರಾಟವಾಗುವ ಎಲ್ಲಾ ಬೈಕ್ ಈ ನಿಯಮದಡಿ ಇರಲೇಬೇಕು ಎಂದು ಕಡ್ಡಾಯಗೊಳಿಸಿದೆ.

ಆ್ಯಂಟಿ ಲಾಕ್ ಬ್ರೇಕ್ ಸಿಸ್ಟಮ್ (ಎಬಿಎಸ್) ಎಬಿಎಸ್ ಬ್ರೇಕ್ ಹೆಚ್ಚು ಸುರಕ್ಷಿತ, ವೇಗದಲ್ಲಿರುವ ವಾಹನಗಳನ್ನು ತಕ್ಷಣವೇ ನಿಧಾನ ಮಾಡಿ ನಿಲ್ಲಿಸುತ್ತದೆ. ಇಷ್ಟೇ ಅಲ್ಲ ಈ ವೇಳೆ ಸ್ಕಿಡ್ ಪ್ರಮಾಣವನ್ನು ತಗ್ಗಿಸುತ್ತದೆ. ಹೀಗಾಗಿ ಎಬಿಎಸ್ ಕಡ್ಡಾಯ ಮಾಡಲಾಗಿದೆ.

ಜ.1ರಿಂದ ಬೈಕ್ ಅಥವಾ ಸ್ಕೂಟರ್ ಖರೀದಿಸುವಾಗ ಎರಡು ಹೆಲ್ಮೆಟ್ ಕಡ್ಡಾಯವಾಗಿ ಖರೀದಿಸಬೇಕು. 2026ರಿಂದ ಮಾರಾಟವಾಗುವ ಹೊಸ ಹೆಲ್ಮೆಟ್ ಬಿಐಎಸ್ ಮಾನದಂಡ ಹೊಂದಿರಬೇಕು. 2026ರ ಕಡ್ಡಾಯ ನಿಯಮ ಹೊಸ ವರ್ಷದಲ್ಲಿ ಮಾರಾಟವಾಗುವ ಹೊಸ ಬೈಕ್‌ಗಳಿಗೆ ಮಾತ್ರ ಅನ್ವಯವಾಗಲಿದ್ದು ಈಗಾಗಲೇ ಖರೀದಿಸಿದ ವಾಹನಗಳಿಗಲ್ಲ.

spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page