
14 ಡಿಸೆಂಬರ್ 2025 ರಂದು ರಾಜ್ಯಮಟ್ಟದ ಜಂಪ್ ರೋಪಿಂಗ್ ಸ್ಪರ್ಧೆಯು ಇಂದಿರಾಗಾಂಧಿ ರೆಸಿಡೆನ್ಸಿಯಲ್ ಸ್ಕೂಲ್ ( ಪದವಿ ಪೂರ್ವ ) ಕುಷ್ಟಗಿ, ಕೊಪ್ಪಳ ಜಿಲ್ಲೆಯಲ್ಲಿ ಜರುಗಿತು.
ಕಾರ್ಕಳದ ಕ್ರಿಯೇಟಿವ್ ಕಾಲೇಜಿನ ವಿದ್ಯಾರ್ಥಿನಿ ಅನುಷ್ಕಾ ಮಹಾಂತೇಶ ಮುರಗೋಡ ರವರು ಜಂಪ್ ರೋಪಿಂಗ್ ಫ್ರೀ ಸ್ಟೈಲ್ ವಿಭಾಗದಲ್ಲಿ ದ್ವಿತೀಯ ಸ್ಥಾನಗಳಿಸಿ ಬೆಳ್ಳಿ ಪದಕ ಹಾಗೂ ಹುಡುಗರ ವಿಭಾಗದಲ್ಲಿ 30 ಸೆಕೆಂಡುಗಳ ಅವಧಿಯ ಜಂಪ್ ರೋಪಿಂಗ್ ನಲ್ಲಿ ಅಭಿಷೇಕ್ ಎಲ್. ಸಿ ರವರು ದ್ವಿತೀಯ ಸ್ಥಾನದೊಂದಿಗೆ ರಜತ ಪದಕವನ್ನು ಪಡೆದುಕೊಂಡಿರುತ್ತಾರೆ.
ವಿದ್ಯಾರ್ಥಿಗಳ ಸಾಧನೆಯನ್ನು ಆಡಳಿತ ಮಂಡಳಿ, ಬೋಧಕ - ಬೋಧಕೇತರ ವರ್ಗದವರು ಶ್ಲಾಘಿಸಿ, ಅಭಿನಂದಿಸಿದ್ದಾರೆ.





