
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ , ಬಿಸಿ ಟ್ರಸ್ಟ್ ರಿಜಿಸ್ಟರ್ ಕಾರ್ಕಳ ತಾಲೂಕು ಸಾಣೂರು ವಲಯದ ಶ್ರೀ ಧರ್ಮಶಾಸ್ತ್ರ ಸ್ವ ಸಹಾಯ ಸಂಘದ ಸದಸ್ಯರಾದ ಶಂಕರಾಚಾರ್ಯ ಇವರ ಕಾಲು ನೋವಿನ ಶಸ್ತ್ರ ಚಿಕಿತ್ಸೆಗೆ ಪೂಜ್ಯರು 20,000 ಸಹಾಯಧನವನ್ನು ಮಂಜೂರಾತಿ ನೀಡಿದ್ದು, ಇದರ ಮಂಜುರಾತಿ ಪತ್ರವನ್ನು ಕಾರ್ಕಳ ತಾಲೂಕಿನ ಯೋಜನಾಧಿಕಾರಿಗಳಾದ ಬಾಲಕೃಷ್ಣ ಹಿರಿಂಜ ಇವರು ಶಂಕರಾಚಾರ್ಯ ಇವರ ಪತ್ನಿ ಶಶಿಕಲ ಇವರಿಗೆ ವಿತರಿಸಿದರು.
ಈ ಸಂದರ್ಭದಲ್ಲಿ ವಲಯದ ಮೇಲ್ವಿಚಾರಕರಾದ ಶ್ರೀಮತಿ ಸುಶೀಲ, ಸೇವಾ ಪ್ರತಿನಿಧಿ ಅರುಣಿ,ಒಕ್ಕೂಟದ ಅಧ್ಯಕ್ಷರು ಪದಾಧಿಕಾರಿಗಳು ಉಪಸ್ಥಿತರಿದ್ದರು.





