
ಕರ್ನಾಟಕದ ಕರಾವಳಿ ಭಾಗದ ಪ್ರತಿಭೆಯೊಂದು ಅಂತರಾಷ್ಟ್ರೀಯ ರಾಜತಾಂತ್ರಿಕ ವೇದಿಕೆಯಲ್ಲಿ ಮಿಂಚಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯ. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಿಟ್ಟೆ ಸಿರಿ ಮೈಲಾಜೆ ಮಹಾಬಲ ಸುವರ್ಣ ರ ತಂಗಿಯ ಮಗ ವಿಶಾಲ್ ಸುಂದರ ಪೂಜಾರಿ ಅವರು ಇತ್ತೀಚೆಗೆ ಇಥಿಯೋಪಿಯಾದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಸ್ವಾಗತಿಸಿ ಗೌರವಿಸಿದರು.
ಡಿಸೆಂಬರ್ 16ರಂದು ಇಥಿಯೋಪಿಯಾಕ್ಕೆ ಅಧಿಕೃತ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿಯವರನ್ನು, ಅಲ್ಲಿನ ಪ್ರತಿಷ್ಠಿತ ‘ಶೆರಿಟಾನ್ ಆದ್ದಿಸ್’ (Sheraton Addis) ಹೋಟೆಲ್‌ನಲ್ಲಿ ಹಣಕಾಸು ವಿಭಾಗದ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ ವಿಶಾಲ್ ಪೂಜಾರಿಯವರು ಬರಮಾಡಿಕೊಂಡರು. ಹೋಟೆಲ್‌ನ ಉನ್ನತ ಅಧಿಕಾರಿಯಾಗಿ ಪ್ರಧಾನಿಯವರ ವಾಸ್ತವ್ಯದ ಜವಾಬ್ದಾರಿಯನ್ನು ಅವರು ಯಶಸ್ವಿಯಾಗಿ ನಿರ್ವಹಿಸಿದರು.ಈ ಭೇಟಿಯ ಅತ್ಯಂತ ವಿಶೇಷ ಕ್ಷಣವೆಂದರೆ, ಇಥಿಯೋಪಿಯಾದ ಪ್ರಧಾನಿ ಡಾ. ಅಭಿಯಿ ಅಹ್ಮದ್ ಅವರು ನರೇಂದ್ರ ಮೋದಿಯವರಿಗಾಗಿ ಆಯೋಜಿಸಿದ್ದ ವಿಶೇಷ ಔತಣಕೂಟಕ್ಕೆ (State Banquet) ವಿಶಾಲ್ ಅವರಿಗೆ ಆಹ್ವಾನ ನೀಡಲಾಗಿತ್ತು.
ಉನ್ನತ ಮಟ್ಟದ ನಾಯಕರು ಪಾಲ್ಗೊಂಡಿದ್ದ ಈ ವೇದಿಕೆಯಲ್ಲಿ ಕಾರ್ಕಳದ ವ್ಯಕ್ತಿಯೊಬ್ಬರು ಭಾಗವಹಿಸಿರುವುದು ಶ್ಲಾಘನೀಯ.ಕಾರ್ಕಳದ ನಿಟ್ಟೆ ಮೂಲದ ವಿಶಾಲ್ ಇಥಿಯೋಪಿಯಾದ ಅತ್ಯುನ್ನತ ಹೋಟೆಲ್ ಸಮೂಹದಲ್ಲಿ ಹಣಕಾಸು ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಎರಡು ದೇಶದ ಪ್ರಧಾನಿಗಳಿದ್ದ ವೇದಿಕೆಯಲ್ಲಿ ವಿಶೇಷ ಅತಿಥಿಯಾಗಿ ಪಾಲ್ಗೊಂಡ ಅಪರೂಪದ ಅವಕಾಶ ಇವರಿಗೆ ಲಭಿಸಿದೆ.ನಿಟ್ಟೆಯಂತಹ ಪುಟ್ಟ ಗ್ರಾಮದಿಂದ ಜಾಗತಿಕ ವೇದಿಕೆಯವರೆಗೆ ಬೆಳೆದು ನಿಂತ ವಿಶಾಲ್ ಪೂಜಾರಿಯವರ ಈ ಸಾಧನೆ ಇಂದಿನ ಯುವ ಪೀಳಿಗೆಗೆ ದೊಡ್ಡ ಸ್ಫೂರ್ತಿಯಾಗಿದೆ..
ಹಾಗೆಯೇ ನಿಟ್ಟೆಯ ಶ್ರೀ ರಾಜ ರಾಜೇಶ್ವರಿ ನಿತ್ಯಾನಂದ ಮಂದಿರದ ಜೀರ್ಣೋದ್ದಾರದ ಕಾರ್ಯಕ್ಕೆ ಸಂಪೂರ್ಣ ಸಹಕಾರ ನೀಡಿರುತ್ತಾರೆ ಶ್ರೀ ಕ್ಷೇತ್ರದ ಆಡಳಿತ ಮಂಡಳಿ ಇವರಿಗೆ ಅಭಿನಂದನೆಯನ್ನು ಸಲ್ಲಿಸಿರುತ್ತಾರೆ





