
ಕೊಚ್ಚಿ: ತೆನ್ನೆಲಾ ಪಂಚಾಯತ್ ವಾರ್ಡ್ಅನ್ನು 47 ಮತಗಳ ಅಂತರದಿಂದ ಗೆದ್ದ ಸಯೀದ್ ಅಲಿ ಮಜೀದ್, ಗೆಲುವಿನ ನಂತರ ಮಲಪ್ಪುರಂ ನಲ್ಲಿ ನಡೆದ ವಿಜಯೋತ್ಸವ ಕಾರ್ಯಕ್ರಮದಲ್ಲಿ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡುತ್ತಾ ‘ಮಹಿಳೆಯರು ರಾಜಕೀಯಕ್ಕಲ್ಲ, ಅವರು ಇರೋದು ತಮ್ಮ ಗಂಡನ ಜೊತೆ ಮಲಗೋಕೆ ಮಾತ್ರ’ ಎಂದು ಸ್ತ್ರೀದ್ವೇಷದ ಹೇಳಿಕೆ ನೀಡಿದ್ದು, ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಮದುವೆಯ ಮೂಲಕ ಕುಟುಂಬಗಳಿಗೆ ಬರುವ ಮಹಿಳೆಯರನ್ನು “ಕೇವಲ ಮತಕ್ಕಾಗಿ, ವಾರ್ಡ್ ವಶಪಡಿಸಿಕೊಳ್ಳಲು ಅಥವಾ ಅವರನ್ನು ಸೋಲಿಸಲು ಅಪರಿಚಿತರ ಮುಂದೆ ಹಾಜರುಪಡಿಸಲು ಉದ್ದೇಶಿಸಲಾಗಿಲ್ಲ. ಮಹಿಳೆಯರು ಇರೋದು ತಮ್ಮ ಗಂಡನ ಜೊತೆ ಮಲಗೋಕೆ ಮಾತ್ರ” ಎಂದು ಅವರು ಹೇಳಿದ್ದರು.
ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್‌ನ ಮಹಿಳಾ ವಿಭಾಗವಾದ ಮಹಿಳಾ ಲೀಗ್‌ನ ಅಧ್ಯಕ್ಷರು ಇತ್ತೀಚೆಗೆ ಬಿಡುಗಡೆ ಮಾಡಿದ ವೀಡಿಯೊವನ್ನು ಉಲ್ಲೇಖಿಸಿದ ಮಜೀದ್, “ಸಂಘಟನೆಯ ಬಗ್ಗೆ ಮಾತನಾಡದಂತೆ ಜನರಿಗೆ ಎಚ್ಚರಿಕೆ ನೀಡಲಾಗಿದೆ. ನೀವು ರಾಜಕೀಯದಲ್ಲಿದ್ದರೆ, ಪಾಣಕ್ಕಾಡ್‌ನ ತಂಗಲ್‌ಗಳ ಬಗ್ಗೆಯೂ ಮಾತನಾಡಲಾಗುತ್ತದೆ. ಕೇಳುವ ಧೈರ್ಯವಿರುವವರು ಮಾತ್ರ ಈ ಕ್ಷೇತ್ರಕ್ಕೆ ಪ್ರವೇಶಿಸಬಹುದು. ಇಲ್ಲದಿದ್ದರೆ, ಅವರು ಗೃಹಿಣಿಯರಾಗಿ ಮನೆಯಲ್ಲೇ ಇರಲು ಸಾಧ್ಯವಾಗುತ್ತದೆ” ಎಂದು ಅವರು ಹೇಳಿದರು.





