24.8 C
Udupi
Tuesday, February 3, 2026
spot_img
spot_img
HomeBlogಮೂಡುಬಿದಿರೆಯ ಎಕ್ಸಲೆಂಟ್ ಆಂಗ್ಲ ಮಾದ್ಯಮ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ

ಮೂಡುಬಿದಿರೆಯ ಎಕ್ಸಲೆಂಟ್ ಆಂಗ್ಲ ಮಾದ್ಯಮ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ

ಕಠಿಣ ವ್ಯವಸ್ಥೆಗಳಿಗೆ ಹೊಂದಿಕೊಂಡಾಗಲೇ ಸಾಧನೆ ಸಾಧ್ಯ DYSP ಪ್ರಮೋದ್ ಕುಮಾರ್ ಅಭಿಮತ

“ವಿದ್ಯಾರ್ಥಿಗಳು ಜೀವನದಲ್ಲಿ ಒಂದು ನಿರ್ದಿಷ್ಟ ಗುರಿಯನ್ನು
ಇಟ್ಟುಕೊಂಡು ಸಾಧಕರಾಗಬೇಕು. ಒಬ್ಬ ವಿದ್ಯಾರ್ಥಿ ತನ್ನ
ಜೀವನವನ್ನು ರೂಪಿಸಿಕೊಳ್ಳಬೇಕಾದರೆ ಅದಕ್ಕೆ ಉತ್ತಮ
ವಾತವರಣ ಬೇಕು. ಅಂತಹ ಅತ್ಯುತ್ತಮ ವ್ಯಾಸಂಗದ
ವಾತವರಣವನ್ನು ಎಕ್ಸಲೆಂಟ್ ವಿದ್ಯಾಸಂಸ್ಥೆ ನೀಡುತ್ತಿದೆ. ಇಲ್ಲಿ
ಕಲಿಯುತ್ತಿರುವ ವಿದ್ಯಾರ್ಥಿಗಳು ಜೀವನದ ಉತ್ತುಂಗ
ಶಿಖರವನ್ನು ತಲುಪಿರುವ ಉದಾಹರಣೆಗಳು ನಮ್ಮ ಕಣ್ಣ
ಮುಂದಿವೆ” ಎಂದು ಬೆಂಗಳೂರಿನ ಸೂಪರಿಡೆಂಟ್ ಆಫ್ ಪೊಲೀಸ್ ಸ್ಟೇಟ್ ಇಂಟಲಿಜೆನ್ಸ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಪ್ರಮೋದ್ ಕುಮಾರ್ ಬಿ. ಇವರು ಅಭಿಪ್ರಾಯ ಪಟ್ಟರು. ಮೂಡುಬಿದಿರೆಯ
ಎಕ್ಸಲೆಂಟ್ ಆಂಗ್ಲ ಮಾದ್ಯಮ ಶಾಲಾ ವಾರ್ಷಿಕೋತ್ಸವ
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಅವರು
“ವಿದ್ಯಾರ್ಥಿಗಳು ತಮ್ಮ ಆಸಕ್ತಿ ಕ್ಷೇತ್ರದಲ್ಲಿ ತಮ್ಮ
ವಿದ್ಯಾಭ್ಯಾಸವನ್ನು ಮುಂದುವರಿಸಬೇಕು. ಪೋಷಕರು
ಮಕ್ಕಳ ಆಸಕ್ತಿಗೆ ಅನುಗುಣವಾಗಿ ವಿದ್ಯಾಭ್ಯಾಸವನ್ನು
ಕೊಡಿಸಬೇಕು. ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ನಿಮ್ಮ ಮಕ್ಕಳು
ಸುರಕ್ಷಿತವಾಗಿ ಅತ್ಯುತ್ತಮ ಶಿಕ್ಷಣ ಪಡೆಯುತ್ತಿದ್ದಾರೆ
ಸಮಾಜದಲ್ಲಿ ಧನಾತ್ಮಕ ಚಿಂತನೆಗಳಿಗಿಂತ ಋಣಾತ್ಮಕ
ಚಿಂತನೆಗಳೇ ಹೆಚ್ಚು ಆದರೆ ವಿದ್ಯಾರ್ಥಿಗಳು ಧನಾತ್ಮಕ
ಚಿಂತನೆಗಳಿಗೆ ಹೆಚ್ಚು ಒತ್ತು ನೀಡಬೇಕು. ಯಾವುದೇ ಒಂದು
ದೊಡ್ಡ ವಿದ್ಯಾಸಂಸ್ಥೆಗಳನ್ನು ಮುನ್ನಡೆಸುವಾಗ
ವ್ಯವಸ್ಥೆಗಳಲ್ಲಿ ಸಣ್ಣ ಪುಟ್ಟ ಲೋಪಗಳಿರಬಹುದು ಆದರೆ
ವಿದ್ಯಾರ್ಥಿಗಳು ಅದರ ಕಡೆಗೆ ಗಮನ ಕೊಡದೆ ನಿಮ್ಮ
ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಗಮನ ಹರಿಸಿ ಸಾಧನೆಯನ್ನು
ಮಾಡಬೇಕು. ಕಠಿಣ ವ್ಯವಸ್ಥೆಗಳಿಗೆ ಹೊಂದಿಕೊಂಡಾಗಲೇ
ಸಾಧನೆ ಸಾಧ್ಯ. ಹಾಗೇಯೇ ಆರಾಮದಾಯಕ ಜೀವನದಿಂದ
ಹೊರಗೆ ಬಂದರೆ ಸಾಧನೆ ಕಟ್ಟಿಟ್ಟ ಬುತ್ತಿ. ವಿದ್ಯಾರ್ಥಿಗಳಿಗೆ ಸಾಧನೆ
ಮಾಡಲು ಬೇಕಾದ ಎಲ್ಲಾ ರೀತಿಯ ಸೌಲಭ್ಯಗಳನ್ನು ಎಕ್ಸಲೆಂಟ್
ವಿದ್ಯಾ ಸಂಸ್ಥೆ ನೀಡುತ್ತಿದೆ. ಅದರ ಸದುಪಯೋಗವನ್ನು
ವಿದ್ಯಾರ್ಥಿಗಳು ಪಡೆದುಕೊಂಡು ಯಶಸ್ಸಿನ ಶಿಖರವನ್ನು
ತಲುಪಬೇಕು ಎಂದು ತಿಳಿಸಿದರು.


ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಶಶಿಧರ್ ಜಿ ಎಸ್ ಮಾತನಾಡಿ “ತಂದೆಯ ಬೆವರಿನ ಶ್ರಮ ತಾಯಿಯ ಅಕ್ಕರೆಗೆ ಯಾವತ್ತೂ ಬೆಲೆ ಕಟ್ಟಲು ಸಾಧ್ಯವಿಲ್ಲ. ವಿದ್ಯಾರ್ಥಿಗಳು ತಮ್ಮ ತಂದೆ ತಾಯಿಗಳನ್ನೇ ಮಾದರಿಯಾಗಿಟ್ಟುಕೊಂಡು ಜೀವನದಲ್ಲಿ ಯಶಸ್ಸನ್ನು ಸಂಪಾದಿಸಿಕೊಳ್ಳಬೇಕು. ವಿದ್ಯಾರ್ಥಿಗಳು ದೊಡ್ಡ ದೊಡ್ಡ ಕನಸುಗಳನ್ನು ಕಾಣಬೇಕು ಹಾಗೂ ಕನಸುಗಳನ್ನು ಸಾಕಾರಗೊಳಿಸಿಕೊಳ್ಳಬೇಕು.
ಕನಸುಗಳನ್ನು ಬೆನ್ನಟ್ಟಿದಾಗ ಸಾಧನೆ ಸಾಧ್ಯ. ಸತತ ಅಭ್ಯಾಸ
ಪರಿಶ್ರಮ ಜೊತೆಯಲ್ಲಿದ್ದರೆ ಯಶಸ್ಸಿನ ಸಮೀಪಕ್ಕೆ
ತಲುಪಬಹುದು. ಮಕ್ಕಳ ಕನಸುಗಳಿಗೆ ಪೋಷಕರು
ಸಹಕಾರ ನೀಡಬೇಕು. ನಿಮ್ಮ ಯೋಚನೆಗಳೇ ನಿಮ್ಮನ್ನು
ಸಾಧನೆಯೆಡೆಗೆ ಕೊಂಡೊಯ್ಯುತ್ತವೆ. ಆದ್ದರಿಂದ
ಯಾವಾಗಲೂ ಧನಾತ್ಮಕ ಚಿಂತನೆಗಳನ್ನೆ ಮೈಗೂಡಿಸಿ. ಇದು
ನಡವಳಿಕೆಗಳಿಂದ ಸಾಧ್ಯ. ಅಂತಹ ನಡವಳಿಕೆಯನ್ನು
ವಿದ್ಯಾರ್ಥಿಗಳು ಜೀವನದುದ್ದಕ್ಕೂ ಅಳವಡಿಸಿಕೊಳ್ಳಬೇಕು”
ಎಂದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಇನ್ನೋರ್ವ ಮುಖ್ಯ ಅತಿಥಿ ಉಡುಪಿ ಜಿಲ್ಲೆಯ ಸಾಮಜಿಕ ಸೇವಾ ಅಧಿಕಾರಿ ರಕ್ಷಿತ್ ಜೈನ್ ಮಾತನಾಡಿ “ ಎಕ್ಸಲೆಂಟ್ ಶಿಕ್ಷಣ ಸಂಸ್ಥೆ ಮತ್ತೊಂದು ಸಿದ್ಧವನ ಗುರುಕುಲ
ಎಂದು ಹೇಳಿದರೆ ತಪ್ಪಾಗಲಾರದು. ಅಂತಹ ಶಿಸ್ತು, ಶಿಕ್ಷಣ ವಾತವರಣ ಈ ವಿದ್ಯಾಸಂಸ್ಥೆಯಲ್ಲಿ ಸಿಗ್ತಾ ಇದೆ. ಇಂತಹ ಶೈಕ್ಷಣಿಕ ಸಂಸ್ಥೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಪುಣ್ಯವಂತರು. ಜ್ಞಾನ, ಇಚ್ಛೆ, ಕ್ರಿಯಾಶಕ್ತಿ ಇದ್ದಾಗ ಜೀವನದಲ್ಲಿ ಏನಾನ್ನಾದರೂ ಸಾಧಿಸಬಹುದು ಇದಕ್ಕೆ ನಿದರ್ಶನವಾಗಿ ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್ಅವರ ಚಿಂತನೆಯಲ್ಲಿ ಕಲಿಯುತ್ತಿರುವ ನೀವೇ ಭಾಗ್ಯವಂತರು”ಎಂದು ವಿದ್ಯಾರ್ಥಿಗಳಿಗೆ ಹೇಳಿದರು.
೨೦೨೧-೨೨ ನೇ ಸಾಲಿನಲ್ಲಿ ೬೨೫ಕ್ಕೆ ೬೨೫ ಅಂಕಗಳನ್ನು
ಪಡೆದುಕೊಂಡ ಸಂಸ್ಥೆಗೆ ಕೀರ್ತಿ ತಂದು ಪದವಿ ಪೂರ್ವ
ಶಿಕ್ಷಣದಲ್ಲಿಯೂ ಅತ್ಯುತ್ತಮ ಅಂಕಗಳಿಂದ JEE ವಿಭಾಗದಲ್ಲಿ
ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿ ಇಂದು ಬೆಂಗಳೂರಿನ ಪ್ರತಿಷ್ಠಿತ
ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ಸಂಸ್ಥೆಯ
ಹಳೆಯ ವಿದ್ಯಾರ್ಥಿ ಶಶಿಭೂಷಣ್ ಮಾತನಾಡಿ “ಇಲ್ಲಿ ಕಲಿಯುತ್ತಿರುವ ಪ್ರತಿಯೊಬ್ಬ ವಿದ್ಯಾರ್ಥಿಯೂ ಎಲ್ಲಿಲ್ಲದ ಅತ್ಯುತ್ತಮ ಶಿಕ್ಷಣವನ್ನು ಪಡೆಯುತ್ತ್ತಿದ್ದಾರೆ. ಇಲ್ಲಿನ ಶೈಕ್ಷಣಿಕ ವ್ಯವಸ್ಥೆ, ಶಿಸ್ತು, ಉಪನ್ಯಾಸಕರ ಲಭ್ಯತೆ ತರಗತಿಗಳು ನಿರಂತರ ಅಭ್ಯಾಸದಿಂ
ನಾನು ರಾಷ್ಟ್ರೀಯ ಮಟ್ಟದಲ್ಲಿ ಅತ್ಯುನ್ನತ ಸಾಧನೆ ಮಾಡಲು ಸಾಧ್ಯವಾಯಿತು ಎಂದು ಹೇಳಿದರು.
ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಮಾತನಾಡಿ ವಿದ್ಯಾರ್ಥಿಗಳಿಗೆ ಸಹಜತೆಯ ಶಿಕ್ಷಣವನ್ನು ಕೊಡುವುದು ನಮ್ಮ ಉದ್ದೇಶವಾಗಿದೆ.
ನಮ್ಮ ವಿದ್ಯಾ ಸಂಸ್ಥೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು
ಅವರು ಮುಖ್ಯವಾಗಿ ಜೀವನದಲ್ಲಿ ಹೇಗೆ ಇರಬೇಕು ಎಂಬುದನ್ನು
ಕಲಿಯುತ್ತಿದ್ದಾರೆ ಶೈಕ್ಷಣಿಕವಾಗಿ ಮಾತ್ರವಲ್ಲದೇ ಎಲ್ಲಾ
ನೈತಿಕ ಕಾರ್ಯ ಚಟುವಟಿಕೆಗಳಲ್ಲಿ ತಮ್ಮನ್ನು ತಾವು
ತೊಡಗಿಸಿಕೊಂಡು ಸಾಧನೆ ಮಾಡುತ್ತಿರುವುದು ನಮಗೆ
ಹೆಮ್ಮೆಯ ವಿಷಯವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ
ಅಧ್ಯಕ್ಷರಾದ ಯುವರಾಜ್ ಜೈನ್ ಮಾತನಾಡಿ “ವರ್ಷಕೊಮ್ಮೆ
ನಡೆಯುವ ಈ ವಾರ್ಷಿಕೋತ್ಸವ ವಿದ್ಯಾರ್ಥಿಗಳ ಪ್ರತಿಭೆಯನ್ನು
ಗುರುತಿಸುವ ಸಂತೋಷ ಪಡಿಸುವ ಹಬ್ಬವಾಗಿದೆ. ಎಕ್ಸಲೆಂಟ್
ವಿದ್ಯಾಸAಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಜೀವನ ಶೈಲಿಯನ್ನು
ಹೇಳಿಕೊಡಲಾಗುತ್ತಿದೆ. ಇಲ್ಲಿ ಸಿಗುವ ಶಿಕ್ಷಣದಿಂದ ನಮ್ಮ
ವಿದ್ಯಾರ್ಥಿಗಳು ರಾಷ್ಟçಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ.
ಸತತ ಅಭ್ಯಾಸ ಪರಿಶ್ರಮದ ಜೊತೆಗರ ಗುರುಗಳಿಗೆ,
ಹೆತ್ತವರಿಗೆ ಪ್ರತಿ ದಿನ ನಮಿಸುತ್ತಾ ಕಲಿಕೆಯಲ್ಲಿ
ತೊಡಗಿಸಿಕೊಂಡರೆ ಯಶಸ್ಸನ್ನು ಸುಲಭವಾಗಿ
ಸಂಪಾದಿಸಿಕೊಳ್ಳಬಹುದು. ವಿದ್ಯಾರ್ಥಿಗಳು ಇಂತಹ ಗುಣಗಳನ್ನು
ಬೆಳೆಸಿಕೊಳ್ಳಬೇಕು. ತಮ್ಮ ತಮ್ಮ ಕೆಲಸಗಳನ್ನು ತಾವೇ
ಮಾಡಿಕೊಂಡರೆ ಜೀವನದಲ್ಲಿ ಎಲ್ಲೇ ಹೋದರೂ ಬದುಕಬಹುದು.
ಮಕ್ಕಳು ತಪ್ಪು ಮಾಡಿದಾಗ ಅದನ್ನು ತಿದ್ದುವ ಕೆಲಸ ಇಲ್ಲಿನ
ಶಿಕ್ಷಕರು ಮಾಡುತ್ತಿದ್ದಾರೆ ಪ್ರತಿದಿನ ಪ್ರತಿಕ್ಷಣ ಅವರ
ಚಲನವಲನಗಳ ಕಡೆಗೆ ಇಲ್ಲಿ ಗಮನ ಹರಿಸಲಾಗುತ್ತದೆ ಈ
ಮೂಲಕ ವಿದ್ಯಾರ್ಥಿಗಳು ಪ್ರಪಂಚದಲ್ಲಿ ಸಾಧನೆಯ
ಗರಿಯನ್ನು ತಲುಪುವಂತೆ ಮಾಡುವುದೇ ನಮ್ಮ
ಉದ್ದೇಶವಾಗಿದೆ” ಎಂದರು
ಇದೇ ಸಂದರ್ಭದಲ್ಲಿ ೨೦೨೪-೨೫ನೇ ಸಾಲಿನಲ್ಲಿ SSLC ವಾರ್ಷಿಕ
ಪರೀಕ್ಷೆಯಲ್ಲಿ ೬೨೫ ಅಂಕಗಳಿಗೆ ೬೨೫ ಅಂಕಗಳನ್ನು ಪಡೆದು
ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಗಳಿಸಿ ಸಂಸ್ಥೆಗೆ ಕೀರ್ತಿ ತಂದ ವಿದ್ಯಾರ್ಥಿನಿ ಸಾನಿಧ್ಯ ರಾವ್ ಸೇರಿದಂತೆ ಅಗ್ರ ಹತ್ತು ರ‍್ಯಾಂಕ್‌ಗಳನ್ನು ಪಡೆದ ೧೪ ಮಂದಿ ಸಾಧಕ ವಿದ್ಯಾರ್ಥಿಗಳನ್ನು ಹಾಗೂ ೬೦೦ಕ್ಕೂ ಅಧಿಕ ಅಂಕಗಳನ್ನು ಪಡೆದ ೪೫ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಸಂಸ್ಥೆಯ ವಾರ್ಷಿಕ ಶೈಕ್ಷಣಿಕ ಚಟುವಟಿಕೆಗಳಲ್ಲಿ ಸಾಧನೆ
ತೋರಿದ ವಿದ್ಯಾರ್ಥಿಗಳನ್ನು ಗೌರವಿಸಿ ಗುರುತಿಸಲಾಯಿತು.
ಇದೇ ಸಂದರ್ಣದಲ್ಲಿ ಕರ್ನಾಟಕ ರಾಜ್ಯ ಎಸ್ ಡಿ ಎಂಸಿ ಸಮನ್ವಯ ಕೇಂದ್ರದವರು ಕೊಡಮಾಡಲ್ಪಡುವ ಮಕ್ಕಳ ಸ್ನೇಹಿ ಶಿಕ್ಷಕ ಪುರಸ್ಕೃತ ಸಂಸ್ಥೆಯ ಚಿತ್ರಕಲಾ ಶಿಕ್ಷಕ ಭಾಸ್ಕರ್ ನೆಲ್ಯಾಡಿ
ಇವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆಯ
ಮುಖ್ಯೋಪಾಧ್ಯಾಯರಾದ ಶಿವಪ್ರಸಾದ್ ಭಟ್ ಶಾಲಾ ವಾರ್ಷಿಕ
ವರದಿಯನ್ನು ವಾಚಿಸಿದರು. ಉಪ ಮುಖ್ಯ ಉಪಧ್ಯಾಯರಾದ
ಜಯಶೀಲ ಸ್ವಾಗತಿಸಿದರು. ವಿದ್ಯಾರ್ಥಿನಾಯಕ ಹಿತೇಶ್ ಗೌಡ
ವಂದಿಸಿದರು. ಶಿಕ್ಷಕಿ ವೆನೆಸ್ಸಾ ನೊರೋನ್ಹಾ ನಿರೂಪಿಸಿದ
ಕಾರ್ಯಕ್ರಮದಲ್ಲಿ ಶ್ರೀಮತಿ ಹರ್ಷಿತಾ ಎಸ್, ಶ್ರೀಮತಿ ಜಯಲಕ್ಷ್ಮಿ
ಕುಮಾರಿ ಶರ್ಮಿತಾ, ಶ್ರೀಮತಿ ಸ್ವರ್ಣಲತಾ ಸಾಧಕರ ವಿವರಗಳನ್ನು ವಾಚಿಸಿದರು. ಸಭಾ ಕಾರ್ಯಕ್ರಮದ ಬಳಿಕ ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ವಿಶೇಷ ಮನೋರಂಜನ ಕಾರ್ಯಕ್ರಮ ಜರುಗಿದವು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page