ರಾಷ್ಟ್ರಮಟ್ಟದ ಸಾಧನೆಗಾಗಿ,ವಿಜೇತ ವಿಶೇಷ ಶಾಲಾ ವಿದ್ಯಾರ್ಥಿನಿ ಪ್ರೀತಿ ಇವರಿಗೆ ಗೌರವ ಸನ್ಮಾನ

ವಿಶ್ವ ವಿಕಲಚೇತನರ ದಿನಾಚರಣೆ 2025, ಉಡುಪಿ ಪುರ ಭವನದಲ್ಲಿ ನಡೆದ ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ವಿಜೇತ ವಿಶೇಷ ಶಾಲಾ ವಿದ್ಯಾರ್ಥಿನಿ ಪ್ರೀತಿ ಈಕೆಯನ್ನು ರಾಷ್ಟ ಮಟ್ಟದ ಫುಟ್ ಬಾಲ್ ಆಟದ ಸಾಧನೆಗಾಗಿ ಗಣ್ಯರ ಸಮ್ಮುಖದಲ್ಲಿ ಗೌರವಿಸಲಾಯಿತು.
ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಪ್ರತೀಕ್ ಬಾಯಲ್, ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್, ರೆಡ್ ಕ್ರಾಸ್ ರಾಜ್ಯ ಸಭಾಪತಿ ಬಸ್ರುರ್ ರಾಜೀವ್ ಶೆಟ್ಟಿ, ಉಪನಿರ್ದೇಶಕಿ ಶ್ಯಾಮಲಾ ಸಿ ಕೆ, ವಿಕಲಚೇತನರ ಕಲ್ಯಾಣಧಿಕಾರಿ ರತ್ನಾ, ರಾಜ್ಯಾಧ್ಯಕ್ಷೆ ಡಾ ಕಾಂತಿ ಹರೀಶ್, ಗೌರವಧ್ಯಕ್ಷೆ ಅಗ್ನೇಸ್, ಜಿಲ್ಲಾಧ್ಯಕ್ಷ ರವೀಂದ್ರ ಎಚ್, ಪಾಲಕರ ಒಕ್ಕೂಟ ಅಧ್ಯಕ್ಷ ಜಯವಿಠ್ಠಲ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.



















