
ನವದೆಹಲಿ: ಹೋಟೆಲ್ ಹಾಗೂ ರೆಸ್ಟೋರೆಂಟ್ ಗಳಲ್ಲಿ ಬಳಸುವ 19 ಕೆಜಿ ವಾಣಿಜ್ಯ ಎಲ್ ಪಿ ಜಿ ಸಿಲಿಂಡರ್ ದರವು 10 ರೂ. ಇಳಿಕೆಯಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ದರ ಇಳಿಕೆ ಮಾಡಿದ್ದು ಇದರಿಂದ ಬೆಂಗಳೂರಿನಲ್ಲಿ ಇದೀಗ 1,654 ರೂ.ಗೆ ಸಿಲಿಂಡರ್ ಸಿಗಲಿದೆ.
ಸೋಮವಾರದಿಂದಲೇ ಈ ಪರಿಷ್ಕೃತ ದರ ಜಾರಿಯಾಗಲಿದ್ದು ಗೃಹಬಳಕೆ ಎಲ್ ಪಿಜಿ ಸಿಲೆಂಡರ್ ದರದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ವಿಮಾನದಲ್ಲಿ ಬಳಸುವ ಇಂಧನ ದರವನ್ನು 5.4ರಷ್ಟು ಏರಿಕೆ ಮಾಡಲಾಗಿದೆ.





