
ಕಾರ್ಕಳ: ಶ್ರೀ ಭುವನೇಂದ್ರ ಕಾಲೇಜು ಕಾರ್ಕಳದಲ್ಲಿ, ಶ್ರೀಮದ್ ಭುವನೇಂದ್ರ ಸ್ವಾಮಿಗಳ 139ನೇ ಪುಣ್ಯತಿಥಿಯ ಪ್ರಯುಕ್ತ ಭುವನೇಂದ್ರ ಸ್ವಾಮಿಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಪೂಜಾ ಕೖಂಕರ್ಯವನ್ನು ನೆರವೇರಿಸಲಾಯಿತು.ಶ್ರೀ ಮಹಾಣಪತಿ ಭಜನಾ ಮಂಡಳಿ, ಧೂಪದಕಟ್ಟೆ,ಅತ್ತೂರು, ಶ್ರೀ ವೆಂಕಟರಮಣ ಭಜನಾ ಮಂಡಳಿ, ಕಾರ್ಕಳ, ರೆಸಿಡೆನ್ಷಿಯಲ್ ಸ್ಕೂಲಿನ ಮಕ್ಕಳು, ಕು. ರಚಿತಾ ಪೈ ಮತ್ತು ತಂಡದವರು ಸುಮಾರು ಎರಡು ಗಂಟೆಗಳ ಕಾಲ ಕ್ರಮವಾಗಿ ಭಜನೆಯನ್ನು ಹಾಡಿದರು.
ಬಳಿಕ ವಿಶ್ವಸ್ಥ ಮಂಡಳಿ ಸದಸ್ಯರಾದ ವೆಂಕಟೇಶ್ ಪ್ರಭು, ಭುವನೇಂದ್ರ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಮಂಜುನಾಥ ಎ ಕೋಟ್ಯಾನ್, ಪದವಿಪೂರ್ವ ಕಾಲೇಜು ಪ್ರಾಂಶುಪಾಲರಾದ ರಮೇಶ್ ಎಸ್ ಸಿ ಹಾಗೂ ಭುವನೇಂದ್ರ ರೆಸಿಡೆನ್ಷಿಯಲ್ ಸ್ಕೂಲ್ ನ ಪ್ರಾಂಶುಪಾಲರಾದ ಶ್ರೀಮತಿ ವೀಣಾ ಕಾಮತ್, ಕಾಲೇಜಿನ ಅಧ್ಯಾಪಕ ವೃಂದ, ಸಿಬಂದಿ ವರ್ಗ ಮತ್ತು ವಿದ್ಯಾರ್ಥಿ ವೃಂದದವರು ಕಾಲೇಜಿನಿಂದ ವೆಂಕಟರಮಣ ದೇವಾಲಯಕ್ಕೆ ಮೆರವಣಿಗೆ ಹೊರಟು, ದೇವಸ್ಥಾನದ ಪೂಜೆಯಲ್ಲಿ ಪಾಲ್ಗೊಂಡರು.






















































