
ನವದೆಹಲಿ: ಡಿಸಿಎಂ ಡಿಕೆ ಶಿವಕುಮಾರ್ ಸುದ್ದಿಗಾರರೊಂದಿಗೆ ಮಾತನಾಡಿ ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷಕ್ಕೆ ಬ್ಲಾಕ್‌ಮೇಲ್ ಮಾಡುವ ವ್ಯಕ್ತಿಯಲ್ಲ. ರಾಜೀನಾಮೆ ನೀಡುವುದಿಲ್ಲ. ಮಾಧ್ಯಮಗಳು ಯಾವುದೇ ಗಾಳಿ ಸುದ್ದಿಯನ್ನು ಪ್ರಕಟಿಸಬೇಡಿ ಎಂದಿದ್ದಾರೆ.
ಎಲ್ಲಿಯ ತನಕ ಕಾಂಗ್ರೆಸ್ ಪಕ್ಷ ಯಾವ ಸ್ಥಾನದಲ್ಲಿ ಕೆಲಸ ಮಾಡು ಎನ್ನುತ್ತದೋ ಅಲ್ಲಿಯವರೆಗೆ ನಾನು ಒಬ್ಬ ಶಿಸ್ತಿನ ಸಿಪಾಯಿ ತರ ಕೆಲಸ ಮಾಡುತ್ತೇನೆ. ಹಗಲು ರಾತ್ರಿ ಕೆಲಸ ಮಾಡಿ ಪಕ್ಷಕ್ಕೆ ದುಡಿದಿದ್ದೇನೆ. ಅಧಿಕಾರಕ್ಕೆ ನಮ್ಮ ಪಕ್ಷ ಬರಲು ಏನು ಮಾಡಬೇಕೋ ಮಾಡುತ್ತೇನೆ. ನಾನೇಕೆ ರಾಜೀನಾಮೆ ಕೊಡುತ್ತೇನೆ. ಆ ಸಂದರ್ಭ ಉದ್ಭವ ಆಗಿಲ್ಲ. ಸುಮ್ಮನೇ ಗಾಳಿ ಸುದ್ದಿ ಮಾಡಬೇಡಿ ಎಂದು ಹೇಳಿದರು.






