
ವಾವ್ ಸೂಪರ್.. ಅದ್ಭುತ ಕಲೆ.. ಎಂತಹ ಜಾಣತನ.. ಇಂತಹ ವಿನೂತನ ಕಲೆ..ನಾವೆಲ್ಲೂ ನೋಡಿರಲಿಲ್ಲ.. ಅಬ್ಬಾ ಕಲಾಕಾರನಿಗೆ ನಮೋ ನಮಃ… ಅದ್ಭುತ ಕಾರ್ಯಕ್ರಮ ,”” ಎಂಬ ಉದ್ಗಾರಗಳು ಶನಿವಾರದ ಸಂಜೆ ಕಾರ್ಕಳ ಮನೋಹರರಾಯರ ವಾಸುಕಿಯ ಅಂಗಳದಲ್ಲಿ ಅನುರಣಿಸುತ್ತಿತ್ತು. ಎಲ್ಲರ ಮುಖದಲ್ಲಿ ಆಶ್ಚರ್ಯ ಮತ್ತು ಮೆಚ್ಚುಗೆಯ ಪ್ರಭೇ ಮಿನಗುತ್ತಿತ್ತು.
ಈ ಎಲ್ಲಾ ಉದ್ಗಾರಗಳಿಗೆ ಕಾರಣ, ಕಾರ್ಕಳ ಅನಂತಶಯನ ಶಾರದಾ ಮಹಿಳಾ ಮಂಡಲ ತಮ್ಮ ಅಧ್ಯಕ್ಷರ ಮನೆಯಲ್ಲಿ ಶ್ರೀ ಶಂಕರ ಪ್ರತಿಷ್ಠಾನದ ಸಹಯೋಗದೊಂದಿಗೆ ಏರ್ಪಡಿಸಿದ ಕರಟ ಕಲಾ ವಸ್ತು ಪ್ರದರ್ಶನ, ನ.15 ಶನಿವಾರ, 2025ರ ಕಳಸ ತಾಲೂಕು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಂದಿಗೋಡು ಡಾಕ್ಟರ್ ರಾಮಚಂದ್ರಯ್ಯನ ಮಗ ಶ್ರೀ ಪೂರ್ಣಚಂದ್ರ ಅವರ ಕರಟ ಕಲಾ ವಸ್ತುಪ್ರದರ್ಶನವನ್ನು ಏರ್ಪಡಿಸಲಾಗಿತ್ತು.
ಕರಟ ಕಲಾ ಪ್ರದರ್ಶನವನ್ನು ಹಿರಿಯ ಚೇತನ ವಿ.ಮನೋಹರ ರಾಯರು ಪೂರ್ಣಚಂದ್ರರು ಕರಟದಲ್ಲೆ ರಚಿಸಿದ ದೀಪ ಬೆಳಗುವುದರೊಂದಿಗೆ ಉದ್ಘಾಟಿಸಿದರು.
ಮಹಿಳಾ ಮಂಡಲದ ಅಧ್ಯಕ್ಷರಾದ ಶ್ರೀಮತಿ ಸಾವಿತ್ರಿ ಮನಹಾರ್ ಪ್ರಾಸ್ತಾವಿಕ ಮಾತನಾಡಿ ,ಕರಟ ಕಲೆಯನ್ನು ಮಾರ್ಗದರ್ಶನ ಇಲ್ಲದೆ ತನ್ನ ಬಿಡುವಿನ ವೇಳೆಯಲ್ಲಿ ತಾನೇ ಮನೆಯಲ್ಲಿ ಏಕಲವ್ಯನಂತೆ ಸಾಧನೆ ಮಾಡಿ ಕರೆತಕಲೆಯಲ್ಲಿ ಪೂರ್ಣ ಚಂದ್ರರು ಪರಿಣತರಾಗಿದ್ದಾರೆ ಎಂದು ಪರಿಚಯ ನೀಡಿ ಸರ್ವರನ್ನು ಸ್ವಾಗತಿಸಿದರು. ಶಂಕರ ಪ್ರತಿಷ್ಠಾನದ ಕಾರ್ಯದರ್ಶಿ ಸತೀಶ್ ರಾವ್ ಕರ್ವಾ ಲು ಕಾರ್ಯಕ್ರಮ ನಿರ್ವಹಿಸಿದರು. ವೇದಿಕೆಯಲ್ಲಿ ಶಂಕರ ಪ್ರತಿಷ್ಠಾನದ ಅಧ್ಯಕ್ಷ ಪದ್ಮನಾಭಬಂಡಿ ಉಪಸ್ಥಿತರಿದ್ದು ಕರಟ ಕಲಾ ಕಾರರಾದ ಪೂರ್ಣಚಂದ್ರರನ್ನು ಅಭಿನಂದಿಸಿದರು.
ಜೊತೆಗೆ ಶಾರದಾ ಮಹಿಳಾ ಮಂಡಲದ ಸದಸ್ಯೆ ಪೂರ್ಣ ಚಂದ್ರರ ಸಹೋದರಿ ಶ್ರೀಮತಿ ಯಶಸ್ವಿನಿ ಅಶ್ವಿನ್.ಎಂ.ರಾವ್ ರವರ ಚಿತ್ರಕಲಾ ಕೃತಿಗಳನ್ನು ಪ್ರದರ್ಶಿಸಲಾಗಿತ್ತು.
ವೇದಿಕೆಯಲ್ಲಿ ಮಹಿಳಾ ಮಂಡಲದ ಉಪಾಧ್ಯಕ್ಷೇ ಶ್ರೀಮತಿ ಉಮಾ ಚಿಪಳುಣಿಕರ್.. ನಿಟ್ಟೆ ಕಾಲೇಜಿನ ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ಮುರಳಿಧರ ಶರ್ಮ ಹಾಗೂ ಮಹಿಳಾ ಮಂಡಲದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ಕೊನೆಯಲ್ಲಿಕಾರ್ಯದರ್ಶಿ ಶ್ರೀಮತಿ ಸುಧಾ ಪ್ರಭು ಧನ್ಯವಾದ ಸಲ್ಲಿಸಿದರು.






