
ಬೆಂಗಳೂರು: ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಬೆಂಗಳೂರಿನಲ್ಲಿ ನಡೆದ ಆರ್‌ಎಸ್‌ಎಸ್ 100 ವರ್ಷದ ಉಪನ್ಯಾಸ ಕಾರ್ಯಕ್ರಮದ ಸಂವಾದದಲ್ಲಿ ಮಾತನಾಡಿ, ಎಲ್ಲ ಮುಸ್ಲಿಮರನ್ನ ಜಿಹಾದಿಗಳು ಎಂದು ಕರೆಯಲು ಆಗಲ್ಲ 142 ಕೋಟಿ ಜನ ಮನಸ್ಸು ಮಾಡಿದರೆ ನಾಳೆ ಬೆಳಗ್ಗೆಯೇ ಹಿಂದೂ ರಾಷ್ಟ್ರ ಆಗಬಹುದು ಎಂದು ಹೇಳಿದ್ದಾರೆ.
ಇನ್ನು ಲವ್ ಜಿಹಾದ್ ಬಗ್ಗೆ ಉತ್ತರಿಸುವ ಸಂದರ್ಭದಲ್ಲಿ, ಹಿಂದೂ ಹೆಣ್ಣು ಮಕ್ಕಳು ಕೆಲವು ಆಕರ್ಷಣೆಗೆ ಒಳಗಾಗಿ ಮೂರ್ಖರಾಗುತ್ತಿದ್ದಾರೆ. ನಮ್ಮ ಮನೆಯಲ್ಲಿ ಸಂಸ್ಕಾರ ಕಲಿಸಬೇಕು ಮಕ್ಕಳು ನಾವು ಜಿಹಾದಿಗೆ ಒಳಗಾಗದಂತೆ ಬೆಳೆಸಬೇಕು ಎಂದಿದ್ದಾರೆ. ಎಲ್ಲಾ ಭಾರತೀಯ ಮುಸ್ಲಿಮರನ್ನು ಒಂದೇ ರೀತಿ ನೋಡಲು ಸಾಧ್ಯವಿಲ್ಲ. 142 ಕೋಟಿ ಜನ ಮನಸ್ಸು ಮಾಡಿದರೆ ಮುಂದೊಂದು ದಿನ ಹಿಂದೂ ರಾಷ್ಟ್ರ ಆಗೇ ಆಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.






























































































































