
ಕಾರ್ಕಳ : ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ,
೨೦೨೫-೨೬ ನೇ ಸಾಲಿನ ವಾರ್ಷಿಕ ಕ್ರೀಡಾಕೂಟವು ನ.9 ರಂದು ಯಶಸ್ವಿಯಾಗಿ ನಡೆಯಿತು.
ಕ್ರೀಡಾಕೂಟದ ಮೊದಲ ಹಂತವಾಗಿ ವಿದ್ಯಾರ್ಥಿಗಳಿಂದ ಆಕರ್ಷಕ, ಶಿಸ್ತು ಬದ್ಧ ಪಥಸಂಚಲನ ಕ್ರೀಡಾಕೂಟಕ್ಕೆ ಮತ್ತಷ್ಟು ಮೆರುಗನ್ನು.ನೀಡಿತು. ಜೊತೆಗೆ ಅತಿಥಿಗಳು ಗೌರವ ವಂದನೆ ಸ್ವೀಕರಿಸಿದರು. ಕ್ರೀಡಾಕೂಟದ ಉದ್ಘಾಟಕರಾಗಿ ಆಗಮಿಸಿದಂತಹ ಕ್ಷೇತ್ರ ಶಿಕ್ಷಣಾಧಿಕಾರಿಯಾದ ಶ್ರೀಮತಿ ಗಿರಿಜಮ್ಮ ಎಸ್.ಆರ್, ಮುಖ್ಯ ಅತಿಥಿಯಾಗಿ ಆಗಮಿಸಿರುವ ಶ್ರೀಮತಿ ಮಾಲಿನಿ ಮುಖ್ಯೋಪಾಧ್ಯಾಯರು, ಎಸ್.ವಿ.ಟಿ. ಆಂಗ್ಲ ಮಾಧ್ಯಮ ಶಾಲೆ, ಕಾರ್ಕಳ,ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಟ್ರಸ್ಟಿಯಾಗಿರುವ ಅನಿಲ್ ಕುಮಾರ್ ಜೈನ್, ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಸಿ.ಇ.ಒ ಮತ್ತು ಪ್ರಾಂಶುಪಾಲರಾಗಿರುವ ಶ್ರೀ ದಿನೇಶ್ ಎಂ. ಕೊಡವೂರು,
ಬಲೂನುಗಳ ಗೊಂಚಲನ್ನು ಆಕಾಶಕ್ಕೆ ಸಾಂಕೇತಿಕವಾಗಿ ತೇಲಿ ಬಿಡುವ ಮೂಲಕ ಹಾಗೂ ಶಾಲೆಯ ರಾಷ್ಟ್ರ ಮತ್ತು ರಾಜ್ಯಮಟ್ಟದ ಕ್ರೀಡಾಪಟುಗಳಿಂದ ಕ್ರೀಡಾ ಜ್ಯೋತಿಯನ್ನು ಬೆಳಗಿಸುವುದರ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು.
ಕ್ರೀಡಾಕೂಟದ ಉದ್ಘಾಟಕರಾಗಿ ಆಗಮಿಸಿದಂತಹ ಕ್ಷೇತ್ರ
ಶಿಕ್ಷಣಾಧಿಕಾರಿಯಾದ ಶ್ರೀಮತಿ ಗಿರಿಜಮ್ಮ ಎಸ್.ಆರ್ ಇವರು ‘ಗೆದ್ದಾಗ ಅಹಂ ಪಟ್ಟವನು ಉಳಿಯಲಾರ, ಸೋತಾಗ ಕುಸಿದು ಹೋಗುವವನು.ಬೆಳೆಯಲಾರ, ನಮ್ಮ ಗುರಿ ದೊಡ್ಡದಾಗಿರಬೇಕು ಪ್ರಯತ್ನ ಸತತ’ದೈಹಿಕವಾಗಿ ಸದೃಢರಾದಾಗ ಮಾತ್ರ ಶೈಕ್ಷಣಿಕ ಸಾಧನೆ ಮಾಡಲು ಸಾಧ್ಯ ಪಾಠದ ಜೊತೆಗೆ ತಮ್ಮ ಆಸಕ್ತಿ ಕ್ಷೇತ್ರದ ಕಡೆಗೂ ಗಮನ ಹರಿಸಬೇಕು. ವಿದ್ಯಾರ್ಥಿಗಳ ಕ್ರೀಡಾಸಕ್ತಿ, ದೇಶವು ಕ್ರೀಡೆಯಲ್ಲಿ ಇನ್ನೂ.ಹೆಚ್ಚಿನ ಸಾಧನೆ ಮಾಡುವಲ್ಲಿ ಪೂರಕವಾಗಲಿ ಎಂದು ಶುಭ ಹಾರೈಸಿದರು.


ಕ್ರೀಡಾಕೂಟದ ಮುಖ್ಯ ಅತಿಥಿಯಾಗಿ ಆಗಮಿಸಿದ ಶ್ರೀಮತಿ ಮಾಲಿನಿ.ಆರೋಗ್ಯಕರ ಮತ್ತು ಕ್ರೀಯಶೀಲರಾಗಲು ಕ್ರೀಡೆ ನೆರವಾಗುತ್ತದೆ.ಕ್ರೀಡೆ ಸೋಲೆ ಗೆಲುವಿನ ಮೆಟ್ಟಲು ಎಂಬ ಅರಿವು ಮೂಡಿಸುತ್ತದೆ. ಆದ್ದರಿಂದ ವಿದ್ಯಾರ್ಥಿಗಳಲ್ಲಿ ದೈರ್ಯ, ಏಕಾಗ್ರತೆ ಮತ್ತು ಸ್ಪರ್ಧಾ ಮನೋಭಾವನೆಯನ್ನು ಬೆಳೆಸುತ್ತದೆ ಎಂದು ಹೇಳಿದ ಅವರು ವಿದ್ಯಾರ್ಥಿಗಳು ಗೆಲ್ಲುವ ಉತ್ಸಾಹದಿಂದ ಪಾಲ್ಗೊಂಡು, ಸೋಲು, ಗೆಲುವನ್ನು ಸಮಾನವಾಗಿ ಸ್ವೀಕರಿಸಿ ವಿದ್ಯಾರ್ಥಿಗಳಿಗೆ ಕ್ರೀಡಾ ಪ್ರತಿಭೆಯನ್ನು ಪ್ರದರ್ಶಿಸಲು
ಕ್ರೀಡಾಕೂಟ ಏರ್ಪಡಿಸಲಾಗಿದ್ದು, ಇದು ಕ್ರೀಡಾ ಸಾಧನೆ ಮಾಡುವಲ್ಲಿ ಸ್ಪೂರ್ತಿಯಾಗಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ ಶಾಲೆ ಮತ್ತು
ಪ್ರೌಢಶಾಲೆಯ ಉಪಪ್ರಾಂಶುಪಾಲರಾದ ಶ್ರೀಮತಿ ವಾಣಿ.ಕೆ, ಉದ್ಯಮಿಗಳಾದ ಶ್ರೀ ದೇವೆಂದ್ರ ನಾಯಕ್, ಸಾರ್ವಜನಿಕ ಸಂಪರ್ಕಾಧಿಕಾರಿಯಾದ ಶ್ರೀಮತಿ ಜ್ಯೋತಿ ಪದ್ಮನಾಭ್ ಭಂಡಿ, ಡೀನ್ ಸ್ಟುಡೆಂಟ್ಸ್ ಅಫೇರ್ ಶಕುಂತಳಾ ಎಮ್
ಸುವರ್ಣ, ಅಕಾಡೆಮಿಕ್ ಅಡ್ವೈಸರ್ ಶ್ರೀಮತಿ ಕೀರ್ತಿ ಆಚಾರ್ಯ, ದೈಹಿಕ ಶಿಕ್ಷಣ ನಿರ್ದೇಶಕರಾದ ಅರುಣ್ ಕುಮಾರ್, ಶ್ರೀಮತಿ ಸೌಜನ್ಯ ಹೆಗ್ಡೆ,ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀಮತಿ ರೇಷ್ಮಾ ಸಲಿಸ್, ಕಿರಣ್, ದರ್ಶನ್ ಹಾಗೂ ಜಯರಾಜ್ ಇವರುಗಳು ಉಪಸ್ಥಿತರಿದ್ದರು.
ಗಣಿತ ಶಿಕ್ಷಕಿ ಶ್ರೀಮತಿ ಪ್ರಿಯ ಪಥಸಂಚನಲದ ಉದ್ಘೋಷಣೆಯನ್ನು ನಡೆಸಿಕೊಟ್ಟರು. ಆಂಗ್ಲ ಭಾಷಾ ಉಪನ್ಯಾಸಕಿ ಕು. ದರ್ಶಿನಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.







