31.1 C
Udupi
Monday, March 16, 2026
spot_img
spot_img
HomeBlogವಿಜೇತ ವಿಶೇಷ ಶಾಲೆಯಲ್ಲಿ, ರಾಜ್ಯಮಟ್ಟದ ಸಿ ಆರ್ ಇ ತರಬೇತಿ ಕಾರ್ಯಗಾರ

ವಿಜೇತ ವಿಶೇಷ ಶಾಲೆಯಲ್ಲಿ, ರಾಜ್ಯಮಟ್ಟದ ಸಿ ಆರ್ ಇ ತರಬೇತಿ ಕಾರ್ಯಗಾರ

ಶ್ರೀ ಗುರು ರಾಘವೇಂದ್ರ ಸೇವಾ ಟ್ರಸ್ಟ್ ರಿ. ವಿಜೇತ ವಿಶೇಷ ಶಾಲೆ ಹಾಗೂ ಡಿಸೆಬಿಲಿಟಿ ಎನ್.ಜಿ.ಓ ಆಲೈಯನ್ಸ್ ಕರ್ನಾಟಕ ರಾಜ್ಯ ವಿಶೇಷ ಶಿಕ್ಷಕ / ಶಿಕ್ಷಕೇತರರ ಸಂಘ ಇದರ *ಸಹಯೋಗದಲ್ಲಿ* ರಾಷ್ಟ್ರೀಯ ನಿರಂತರ ಸಂಪನ್ಮೂಲ ಶಿಕ್ಷಣ ಕಾರ್ಯಾಗಾರ-2025 ರಾಜ್ಯದಲ್ಲಿರುವ ವಿಶೇಷ ಶಿಕ್ಷಕರಿಗಾಗಿ ರಾಜ್ಯ ಮಟ್ಟದ 3 ದಿನದ ಸಿ ಆರ್ ಇ ತರಬೇತಿ ಕಾರ್ಯಗಾರವನ್ನು ಕ.ರಾ.ವಿ.ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಡಾ ವಸಂತ್ ಕುಮಾರ್ ಶೆಟ್ಟಿ ಇವರು ದೀಪ ಪ್ರಜ್ವಲನದೊಂದಿಗೆ ಉದ್ಘಾಟಿಸಿ ಶುಭ ಹಾರೈಸಿದರು.

ಸಭಾಧ್ಯಕ್ಷತೆಯನ್ನು ವಿಜೇತ ವಿಶೇಷ ಶಾಲಾ ಗೌರವಾದ್ಯಕ್ಷರು ಹಾಗೂ ರಾಜಕೀಯ ಮುಖಂಡರು ಉದಯ್ ಶೆಟ್ಟಿ ಮುನಿಯಾಲು ಇವರು ವಹಿಸಿದ್ದರು.

ಸಂಪನ್ಮೂಲ ವ್ಯಕ್ತಿಗಳಾಗಿ ಡಾ.ಅಶೋಕ ಕಾಮತ್ ಉಪನಿರ್ದೇಶಕರು ಪ್ರಾಂಶುಪಾಲರು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಉಡುಪಿ ಇವರು ಉಪಸ್ಥಿತರಿದ್ದು RTE Act 2009 ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದರು.

ಮುಖ್ಯ ಅಥಿತಿಗಳಾಗಿ ಪಾಲಕರ ಸಂಘದ ಜಿಲ್ಲಾ ಅಧ್ಯಕ್ಷರಾದ ಜೈವಿಠಲ್ , ಜಿಲ್ಲಾ ವಿಕಲಚೇತನರ ಕಲ್ಯಾಣ ಇಲಾಖಾ ಯೋಜನಾ ಸಹಾಯಕರಾದ ಶಿವಾಜಿ , ಕ.ರಾ.ವಿ.ಶಿ ಸಂಘದ ಗೌರವಾಧ್ಯಕ್ಷರಾದ ಆಗ್ನೇಸ್ ಕುಂದರ್, ಜಿಲ್ಲಾಧ್ಯಕ್ಷರಾದ ಹೆಚ್ ರವೀಂದ್ರ ಡಿ ಎನ್ ಎ ಉಪಾಧ್ಯಕ್ಷರು ಹಾಗೂ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷೆ ಡಾ. ಕಾಂತಿ ಹರೀಶ್ ಉಪಸ್ಥಿತರಿದ್ದರು.

ಕಾರ್ಯಕ್ರಮ ವೀಕ್ಷಕರಾದ ಜಿ. ಚಂದ್ರಶೇಖರ್ ಮುಖ್ಯೋಪಾಧ್ಯಾಯರು ಚೆಂಗರೆಡ್ಡಿ ವಿಶೇಷ ಶಾಲೆ ಹಾಗೂ ಕಾರ್ಯಕ್ರಮದ ಸಂಯೋಜಕರು ಲೋಕೇಶ್ ರಾವ್ ಉಪಸ್ಥಿತರಿದ್ದು 3 ದಿನದ ಕಾರ್ಯಾಗಾರದ ಜವಾಬ್ದಾರಿಯನ್ನು ವಹಿಸಿಕೊಂಡಿರುತ್ತಾರೆ.

ಪ್ರೇಮ ತಲ್ಲೂರು ವಿಶೇಷ ಶಾಲೆಯ ಮುಖ್ಯ ಶಿಕ್ಷಕಿ ಇವರು ಕಾರ್ಯಾಗಾರದ ವಿಷಯವಾಗಿ ಉಪನ್ಯಾಸ ನೀಡಿದರು.

ಸುಮಾರು 180 ಮಂದಿ ವಿಶೇಷ ಶಿಕ್ಷಕರು ಕಾರ್ಯಾಗಾರದ ಸದುಪಯೋಗ ಪಡೆದುಕೊಳ್ಳಲು ಭಾಗವಹಿಸಿದ್ದಾರೆ.

ವಿಶೇಷ ಶಿಕ್ಷಕಿ ಶ್ರೀನಿಧಿ ಅಶೋಕ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಡಾ.ಕಾಂತಿ ಹರೀಶ್ ಸ್ವಾಗತಿಸಿ ವಿಶೇಷ ಶಿಕ್ಷಕಿ ದೀಪಿಕಾ ವಂದಿಸಿದರು.

spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page