
ಚಿಕ್ಕಮಗಳೂರು: ಚಿಕ್ಕಮಗಳೂರಿನ ಕೊಪ್ಪ ತಾಲೂಕಿನ ಬಗ್ಗುಂಜಿ ಮಠದ ವೆಂಕಟೇಶ ಗುರೂಜಿ ಡಿಕೆ ಶಿವಕುಮಾರ್ ಅವರ ಸಿಎಂ ಯೋಗದ ಕುರಿತು ಸ್ಫೋಟಕ ಭವಿಷ್ಯ ನುಡಿದಿದ್ದಾರೆ. ಅದೇನೆಂದರೆ ಡಿಕೆಶಿ ಜಾತಕದಲ್ಲಿ ರಾಜಲಕ್ಷ್ಮಿ ಯೋಗ ಇದೆ. ನವೆಂಬರ್ 26ರ ಬಳಿಕ ಡಿ.ಕೆ ಶಿವಕುಮಾರ್ ಸಿಎಂ ಆಗೋದನ್ನ ಯಾರೂ ತಡೆಯೋಕಾಗಲ್ಲ ಎಂದು ಹೇಳಿದ್ದಾರೆ.
ನವೆಂಬರ್ 26ರ ಬಳಿಕ ಡಿಕೆಶಿ ಸಿಎಂ ಆಗೋದ್ನ ಯಾರೂ ತಡೆಯಲಾಗದು. ಡಿಕೆಶಿ ಸಿಎಂ ಆದ್ರೂ ಕೇವಲ ಒಂದೂವರೆ ವರ್ಷ ಅಷ್ಟೆ ಅಧಿಕಾರ ಮಾಡೋದು. 2031ರ ವರೆಗೆ ರಾಜನಂತೆ ಇರ್ತಾರೆ. ಏಕೆಂದ್ರೆ ಡಿಕೆಶಿ ಜಾತಕದಲ್ಲಿ ರಾಜಲಕ್ಷ್ಮಿ ಯೋಗ ಇದೆ. ಈ ಯೋಗ ಎಲ್ಲರಿಗೂ ಇರಲ್ಲ, ಅವರ ಜಾತಕದಲ್ಲಿ ಇದೆ. ಹಾಗಾಗಿ ಸಿಎಂ ಆಗೇ ಆಗ್ತಾರೆ. ಒಂದೂವರೆ ವರ್ಷದ ಹಿಂದೆಯೇ ಅವರಿಗೆ ಹೇಳಿ ಮಂತ್ರಾಕ್ಷತೆ ಕೊಟ್ಟಿದ್ದೇನೆ. ಅವರಿಗೆ ಮುಖ್ಯಮಂತ್ರಿ ಯೋಗ ಇದೆ, ಅದನ್ನ ಯಾರೂ ತಪ್ಪಿಸಲು ಆಗಲ್ಲ ಎಂದು ಭವಿಷ್ಯ ನುಡಿದಿದ್ದಾರೆ.






















































