
ಕಾರ್ಕಳ: ಶಾಲಾ ಶಿಕ್ಷಣ ಇಲಾಖೆ, ಕರ್ನಾಟಕ ಸರಕಾರ, ಕ್ಷೇತ್ರ
ಶಿಕ್ಷಣಾಧಿಕಾರಿಗಳ ಕಛೇರಿ ಕಾರ್ಕಳ ಇವರ ಆಶ್ರಯದಲ್ಲಿ ರಾಧಾನಾಯಕ್
ಸರಕಾರಿ ಪ್ರೌಢಶಾಲೆ, ಎಣ್ಣೆಹೊಳೆ, ಕಾರ್ಕಳ ಇಲ್ಲಿ ನಡೆದ 14ರ
ವಯೋಮಿತಿಯ ಬಾಲಕ ಬಾಲಕಿಯರ ಕ್ರೀಡಾಕೂಟದಲ್ಲಿ ಕಾರ್ಕಳದ
ಕ್ರೈಸ್ಟ್ ಕಿಂಗ್ ಆಂಗ್ಲಮಾಧ್ಯಮ ಪ್ರಾಥಮಿಕ ಶಾಲೆಯ ಹಲವು
ವಿದ್ಯಾರ್ಥಿಗಳು ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಎಂಟನೇ
ತರಗತಿಯ ವಿದ್ಯಾರ್ಥಿಗಳಾದ ಅಭಿಷ್ 400 ಮೀ ಓಟ ಮತ್ತು 80ಮೀ ಹರ್ಡಲ್ಸ್ನಲ್ಲಿ
ಪ್ರಥಮ ಸ್ಥಾನ, ಸ್ಮಿತಿ ಶೆಟ್ಟಿ ಎತ್ತರ ಜಿಗಿತ ದ್ವಿತೀಯ, ಸುದೀಕ್ಷಾ ಚಕ್ರ ಎಸೆತ
ದ್ವಿತೀಯ, 6ನೇ ತರಗತಿಯ ತ್ರಿಷ್ಮಾ 200 ಮೀ ದ್ವಿತೀಯ ಸ್ಥಾನ
ಪಡೆದುಕೊಂಡು ತಾಲುಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಉಳಿದಂತೆ
ಬಾಲಕರ 400×100 ರಿಲೇಯಲ್ಲಿ ಎಂಟನೇ ತರಗತಿಯ ಅಭಿಷ್, ಆ್ಯಶ್ಲಿನ್, ಏಳನೇ
ತರಗತಿಯ ಪ್ರಸ್ತುತ್ ಮತ್ತು ಆಯುಷ್ ದ್ವಿತೀಯ ಸ್ಥಾನ, ಬಾಲಕಿಯರ
400×100 ರಿಲೇಯಲ್ಲಿ ಎಂಟನೇ ತರಗತಿಯ ಹಿಝ್ಮಾ, ದ್ವಿತಿ, 7ನೇ ತರಗತಿಯ
ಹ್ಯಾಷಲ್, ತ್ರಿಷ್ಮಾ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.



















































