
ರಕ್ಷಿತಾ ಪ್ರೇಮ್ ಇದೇ ವಾರಾಂತ್ಯದಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಆರಂಭ ಆಗ್ತಿರುವ ಕಾಮಿಡಿ ಕಿಲಾಡಿಗಳು ಸೀಸನ್ 5 ಮತ್ತು ಡಾನ್ಸ್ ಕರ್ನಾಟಕ ಡಾನ್ಸ್ ಶೋ ಬಿಡ್ತಾರೆ ಎಂಬ ಸುದ್ದಿ ಹರಿದಾಡುತ್ತಿದ್ದು ಈಗ ತಾನ್ಯಾಕೆ ಈ ನಿರ್ಧಾರ ತೆಗೆದುಕೊಂಡಿದ್ದೇನೆ ಎಂಬುದನ್ನು ರಕ್ಷಿತಾ ಪ್ರೇಮ್ ಹೇಳಿದ್ದಾರೆ.
ರಕ್ಷಿತಾ ಪ್ರೇಮ್ ಅವರು ಕಾಮಿಡಿ ಕಿಲಾಡಿಗಳು ಶೋ ಶುರುವಾದಾಗಿನಿಂದ ಜಡ್ಜ್ ಸ್ಥಾನದಲ್ಲಿ ಕಾಣಿಸಿಕೊಳ್ತಿದ್ದು ಆದರೆ ಇದೀಗ ಅವರು ಶೋ ಬಿಡ್ತಿದ್ದಾರೆ. ಈ ಕುರಿತು ಇನ್ಸ್ಟಾಗ್ರಾಮ್ ನಲ್ಲಿ ಸ್ಟೋರಿ ಪೋಸ್ಟ್ ಮಾಡಿರುವ ರಕ್ಷಿತಾ ‘ಒಂದು ನಿರ್ದಿಷ್ಟ ಕಾರ್ಯಕ್ರಮಕ್ಕೆ ನನ್ನನ್ನು ಟ್ಯಾಗ್ ಮಾಡುವವರಿಗೆ ಅಂತ ಬರೆದಿರುವ ರಕ್ಷಿತಾ, ನಾನು 9 ವರ್ಷಗಳಿಂದ ಕೆಲಸ ಮಾಡುತ್ತಿದ್ದ ಆ ನಿರ್ದಿಷ್ಟ ಚಾನೆಲ್ ಗೆ ನಾನು ಇನ್ಮುಂದೆ ಭಾಗವಾಗಿರುವುದಿಲ್ಲ. ಜೀವನ ಬದಲಾಗಬೇಕಾಗಿದೆ. ನಾನು ನನ್ನ ಕಂಫರ್ಟ್ ಝೋನ್ನಿಂದ ಹೊರಬಂದು ಹೊಸದನ್ನು ಪ್ರಯತ್ನಿಸಬೇಕು. ಆದ್ದರಿಂದ ನಾನು ಡಾನ್ಸ್ ಶೋ ಭಾಗವಾಗುವುದಿಲ್ಲ. ಪ್ರೇಕ್ಷಕರು ನನಗೆ ತೋರಿಸಿದ ಪ್ರೀತಿಗೆ, ನಾನು ನಿಮಗೆ ಮತ್ತು ದೇವರಿಗೆ ಯಾವಾಗಲೂ ಕೃತಜ್ಞರಾಗಿರುತ್ತೇನೆ. ಬಹಳಷ್ಟು ಪ್ರೀತಿ ಮತ್ತು ಆಶೀರ್ವಾದಗಳೊಂದಿಗೆ, ನನಗೆ ಅಲ್ಲಿ ತುಂಬಾ ಸುಂದರವಾದ ವರ್ಷಗಳನ್ನು ನೀಡಿದ್ದಕ್ಕಾಗಿ ಧನ್ಯವಾದಗಳು. ನಾನು ನಿಮ್ಮನ್ನು ಸದಾ ಪ್ರೀತಿಸುತ್ತೇನೆ. ನಾನು ಹಿಂತಿರುಗಿದಾಗ ಪ್ರೀತಿ ಯಾವಾಗಲೂ ಇರುತ್ತೆ ಎಂದು ನಾನು ಭಾವಿಸುತ್ತೇನೆ’ ಎಂದು ಹೇಳಿದ್ದಾರೆ.



















































