
ಪ್ರತಿವರ್ಷದಂತೆ ಈ ಬಾರಿಯೂ ಬಿಜೆಪಿ ಮಹಿಳಾ ಮೋರ್ಚಾ ಕಾರ್ಕಳ ವತಿಯಿಂದ ಗೋಪೂಜೆ ಕಾರ್ಯಕ್ರಮ ದಿನಾಂಕ 24/10/2025 ರಂದು ಕಾರ್ಕಳದ ತೆಳ್ಳಾರು ವೆಂಕಟರಮಣ ಗೋಶಾಲೆಯಲ್ಲಿ ಅಧ್ಯಕ್ಷರಾದ ಶ್ರೀಮತಿ ವಿನಯ ಡಿ ಬಂಗೇರ ಅವರ ನೇತೃತ್ವದಲ್ಲಿ ನಡೆಯಿತು.

ಮಹಿಳಾ ಮೋರ್ಚಾ ಕಾರ್ಯಕರ್ತೆಯರು ಗೋವುಗಳಿಗೆ ಪೂಜೆ ಸಲ್ಲಿಸಿ, ತಿನಸುಗಳನ್ನು ನೀಡಿ, ಮಹಿಳಾ ಮೋರ್ಚಾದಿಂದಿರುವ ಗೋಹುಂಡಿಯ ಕಾಣಿಕೆಯನ್ನು ಸಮರ್ಪಿಸಿದರು.
ಈ ಸಂದರ್ಭದಲ್ಲಿ ಕಾರ್ಕಳ ಬಿಜೆಪಿಯ ಕ್ಷೇತ್ರಾಧ್ಯಕ್ಷರಾದ ನವೀನ್ ನಾಯಕ್, ಮಹಿಳಾಮೋರ್ಚಾದ ಜಿಲ್ಲಾ ಉಪಾಧ್ಯಕ್ಷರಾದ ಮಾಲಿನಿ ಜೆ ಶೆಟ್ಟಿ ,ಕಾರ್ಯದರ್ಶಿಗಳಾದ ಕವಿತಾ ಹರೀಶ್, ಮಹಿಳಾ ಮೋರ್ಚಾ ತಾಲೂಕು ಉಪಾಧ್ಯಕ್ಷರುಗಳಾದ ಭಾರತಿ ಅಮೀನ್ ,ಪಲ್ಲವಿ ಪ್ರವೀಣ್, ಕಾರ್ಯದರ್ಶಿಗಳಾದ ಲಕ್ಷ್ಮೀಶೆಟ್ಟಿ, ಲಕ್ಷ್ಮೀ ಕಿಣಿ, ಕೋಶಾಧಿಕಾರಿ ಸುಚಿತ್ರಾ ಶೆಟ್ಟಿ, ಮಹಾಶಕ್ತಿ ಕೇಂದ್ರ ಅಧ್ಯಕ್ಷರುಗಳಾದ ಶುಭಾ ಪಿ ಶೆಟ್ಟಿ,ಮಮತಾ ಸುವರ್ಣ ಹಾಗೂ ಪ್ರಮೀಳಾ ಪೂಜಾರಿ. ಪುರಸಭೆಯ ಮಾಜಿ ಅಧ್ಯಕ್ಷರಾದ ಸುಮಾಕೇಶವ್, ಪದಾಧಿಕಾರಿಗಳಾದಂತಹ ಜ್ಯೋತಿ ರಮೇಶ್, ಗೀತಾ ದಾನಶಾಲೆ, ದೀಪಾ ನಾಯಕ್, ಜ್ಯೋತಿ ಬಬಿತಾ, ನಿರೀಕ್ಷಾ ರಾಜೇಶ್, ರಜನಿ ಹೆಗ್ಡೆ, ಸ್ವಾತಿ ಮತ್ತಿತರರು ಉಪಸ್ಥಿತರಿದ್ದು ಸಹಕರಿಸಿದರು.



















































