
ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಗ್ರಾಮದಲ್ಲಿ ಗುರು ತಿಪ್ಪೇರುದ್ರಸ್ವಾಮಿ ದೇಗುಲಕ್ಕೆ ಸೇರಿದ ವೇದಾಧ್ಯಯನ ಶಾಲೆಯಲ್ಲಿ ವಿದ್ಯಾರ್ಥಿಯೊಬ್ಬ ದೂರದ ಊರಿನಲ್ಲಿರುವ ಅವರ ಪೋಷಕರಿಗೆ ಬೇರೊಬ್ಬರ ಮೊಬೈಲ್‌ನಿಂದ ಕರೆ ಮಾಡಿದಕ್ಕೆ ಆಕ್ರೋಶಗೊಂಡ ಮುಖ್ಯ ಶಿಕ್ಷಕ ಮನಸೋಇಚ್ಛೆ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿ ಕ್ರೌರ್ಯ ಮೆರೆದಿರುವ ಪ್ರಕರಣ ನಡೆದಿದೆ.
ಈ ವೇದಾಧ್ಯಯನ ಶಾಲೆಯಲ್ಲಿ ವಿವಿದೆಡೆಯ ಹಲವು ವಿದ್ಯಾರ್ಥಿಗಳು ವೇದಾಧ್ಯಯನ ಮಾಡುತ್ತಿದ್ದು ಉತ್ತರ ಕರ್ನಾಟಕ ಮೂಲದ ಓರ್ವ ವಿದ್ಯಾರ್ಥಿ ಮೇಲೆ ವೀರೇಶ್ ಹಿರೇಮಠ್ ಎಂಬ ಮುಖ್ಯ ಶಿಕ್ಷಕ ಆ ವಿದ್ಯಾರ್ಥಿಗೆ ಕಾಲಲ್ಲಿ ಒದ್ದು ವಿಕೃತಿ ಮೆರೆದಿದ್ದು, ಆತನ ಕ್ರೌರ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ. ಈ ರೀತಿ ಅಮಾನುಷವಾಗಿ ಶಿಕ್ಷಕ ಕ್ರೌರ್ಯ ಮೆರೆದ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು ಇದರ ಬೆನ್ನಲ್ಲೇ ಶಿಕ್ಷಕ ವಿರೇಶ್ ನಾಪಾತ್ತೆಯಾಗಿದ್ದಾನೆ. ಸಾರ್ವಜನಿಕ ವಲಯದಿಂದ ಈ ಕೃತ್ಯಕ್ಕೆ ಬಾರಿ ಆಕ್ರೋಶ ವ್ಯಕ್ತವಾಗಿದೆ.



















































