
ಬೆಂಗಳೂರು: ಮಂಗಳವಾರ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್ ಪ್ರಸನ್ನ ಅವರು 2025-26ನೇ ಸಾಲಿಗೆ ರಾಜ್ಯದ ಪಿಜಿ ವೈದ್ಯಕೀಯ ಪದವಿ/ಡಿಪ್ಲೊಮಾ ಕೋರ್ಸುಗಳಿಗೆ ಸೇರಲು ಆಸಕ್ತರಾದ ನೀಟ್ ಪಿಜಿ- 2025ರಲ್ಲಿ ಅರ್ಹತೆ ಪಡೆದಿರುವ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ಅ.17ರವರೆಗೆ ಬೆಳಿಗ್ಗೆ 11 ಗಂಟೆಯವರೆಗೆ ವಿಸ್ತರಿಸಲಾಗಿದೆ ಎಂದು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯುಜಿಸಿಇಟಿ 2025ರ ಬಿ.ಎಸ್ಸಿ.ನರ್ಸಿಂಗ್, ಬಿ-ಫಾರ್ಮ, ಫಾರ್ಮ-ಡಿ ಮತ್ತು ಬಿಪಿಟಿ ಕೋರ್ಸುಗಳಿಗೆ ಅಂತಿಮ ಸುತ್ತಿನಲ್ಲಿ ಸೀಟು ಹಂಚಿಕೆಯಾಗಿರುವ ಅಭ್ಯರ್ಥಿಗಳು ಶುಲ್ಕ ಪಾವತಿಸಿ, ಸೀಟು ಖಾತರಿ ಚೀಟಿ (ಕನ್ಫರ್ಮೇಷನ್ ಸ್ಲಿಪ್) ಡೌನ್ ಲೋಡ್ ಮಾಡಿಕೊಂಡು ಅ.16ರ ಸಂಜೆ 5.30ರೊಳಗೆ ಕಾಲೇಜಿಗೆ ವರದಿ ಮಾಡಿಕೊಳ್ಳಲು ಸೂಚಿಸಲಾಗಿದೆ. ಇದಕ್ಕಾಗಿ ಅಭ್ಯರ್ಥಿಗಳು ಅ.16ರ ಸಂಜೆ 4ರೊಳಗೆ ಶುಲ್ಕ ಪಾವತಿಸಿ, ಸಂಜೆ 5ರೊಳಗೆ ಕನ್ಫರ್ಮೇಷನ್ ಸ್ಲಿಪ್ ಡೌನ್ ಲೋಡ್ ಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.









