
ಶಿವಮೊಗ್ಗ: ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ರಾಜ್ಯದಲ್ಲಿ ಆರ್‌ಎಸ್ ಚಟುವಟಿಕೆಗಳು ನಡೆಸದಂತೆ ನಿಷೇಧಿಸಲು ಮುಂದಾದರೆ ಕಾಂಗ್ರೆಸ್ ನಿರ್ನಾಮವಾಗಲಿದೆ ಎಂದು ಕಿಡಿಕಾಡಿದ್ದಾರೆ.
ಆರ್ ಎಸ್ ಎಸ್ ಪ್ರಾಮಾಣಿಕತೆ, ಹಿಂದುತ್ವ, ರಾಷ್ಟ್ರ ಪ್ರೇಮದಿಂದ ವಿಶ್ವಾದ್ಯಂತ ಮನ್ನಣೆ ಪಡೆದಿದ್ದು ಇದನ್ನು ಸಹಿಸದ ಪುಡಿ ಹಾಗೂ ಚಿಲ್ಲರೆ ರಾಜಕಾರಣಿಗಳು ಮಾತನಾಡುತ್ತಾರೆ. ಸಚಿವ ಪ್ರಿಯಾಂಕ್ ಖರ್ಗೆ, ಬಿ.ಕೆ ಹರಿಪ್ರಸಾದ್ ಹುಚ್ಚು ಹುಚ್ಚು ಹೇಳಿಕೆ ನೀಡುತ್ತಿದ್ದಾರೆ. ಸೂರ್ಯನ ಮೇಲೆ ಉಗಿದರೆ ತನ್ನ ಮೇಲೆ ಬೀಳುತ್ತದೆ ಎಂಬ ಕಲ್ಪನೆ ಇಲ್ಲದ ಪುಡಿ ರಾಜಕಾರಣಿಗಳು ಆನೆ ಹೋಗುವ ವೇಳೆ ನಾಯಿ ಬೊಗಳಿದ ಹಾಗೆ ಮಾತನಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.






















































