
ನಿಟ್ಟೆ ಪರಪ್ಪಾಡಿ ಸುರೇಶ ಆಚಾರಿ ಇವರ ಮಗನಾದ ಅಭಿಷೇಕ್ ಆಚಾರಿ ಇತೀಚೆಗೆ ಬೆಲ್ಮಣಿನ ವಸತಿ ಗೃಹ ಒಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.
ಈ ವಿಷಯ ತಿಳಿದ ಕೂಡಲೇ ಕಾಂಗ್ರೆಸ್ ಮುಖಂಡರಾದ ಮುನಿಯಾಲು ಉದಯ ಕುಮಾರ್ ಶೆಟ್ಟಿ ಯವರು ಅವರ ಮನೆಗೆ ಭೇಟಿ ನೀಡಿ, ಅವರ ತಂದೆ ಸುರೇಶ
ಆಚಾರಿ ಮತ್ತು ಅವರ ಕುಟುಂದವರೊಂದಿಗೆ ಮಾತಾಡಿ, ಆತ್ಮಹತ್ಯೆ ಮಾಡಿಕೊಂಡ ವಿಷಯದ ಬಗ್ಗೆ ಸರಿ ಯಾದ ರೀತಿಯಲ್ಲಿ ತನಿಖೆ ಯನ್ನು ಸಂಬಂಧ ಪಟ್ಟ ಅಧಿಕಾರಿಯೊಂದಿಗೆ ಚರ್ಚಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣಕರ್ತರಾದವರನ್ನು ಬಂದಿಸುವ ಹಾಗೂ ಆವರನ್ನು ಶಿಕ್ಷೆಗೆ ಕಾನೂನು ರೀತಿಯೆಲ್ಲಿ ಒಳಪಡಿಸುವ ಬಗ್ಗೆ ಧ್ಯರ್ಯವನ್ನು ತುಂಬಿರುತ್ತಾರೆ. ಹಾಗೂ ಅವರ ಆರ್ಥಿಕ ಕಷ್ಟಕ್ಕೆ ಸ್ಪಂದಿಸುವ ಭರವಸೆಯನ್ನು ನೀಡಿರುತ್ತಾರೆ.
ಈ ಸಮಯದಲ್ಲಿ ನಿಟ್ಟೆ ಗ್ರಾಮೀಣ ಕಾಂಗ್ರೆಸ್ ನ ಅಧ್ಯಕ್ಷರಾಗಿರುವ ಮನೋಜ್ ಶೆಟ್ಟಿ ಹಾಗೂ ಪರಪ್ಪಾಡಿ ಬೂತಿನ ಕಾಂಗ್ರೆಸ್ ಕಾರ್ಯಕರ್ತ ಯೇಸುದಾಸ್ ಉಪಸ್ಥಿತರಿದ್ದರು.






















































