ವಿವಾದದ ಬಗ್ಗೆ , ನಟ ಕಿಚ್ಚ ಸುದೀಪ್ ಪ್ರತಿಕ್ರಿಯೆ

ಕನ್ನಡದ ಹೆಸರಾಂತ ಶೋ ಬಿಗ್ ಬಾಸ್ ನಡೆಯುತ್ತಿರುವ ಜಾಲಿವುಡ್ ಸ್ಟುಡಿಯೋ ವಿವಾದದ ಕುರಿತು ಕೊನೆಗೂ ನಟ ಕಿಚ್ಚ ಸುದೀಪ್ ಮಾತನಾಡಿದ್ದಾರೆ.
ಕನ್ನಡಿಗರ ಆಶೀರ್ವಾದ ಇರುವರೆಗೂ ಬಿಗ್ ಬಾಸ್ ಅಷ್ಟು ಸುಲಭವಾಗಿ ನಿಲ್ಲಲ್ಲ. ಇಲ್ಲಿ ನಡೆದಿದ್ದೇ ಬೇರೆ ಹೊರಗಡೆ ನಡಿತಾ ಇದ್ದಿದ್ದೇ ಬೇರೆ. ವಿವಾದದ ವಿಚಾರಕ್ಕೂ ಬಿಗ್ ಬಾಸ್ ಗೆ ಕಲರ್ಸ್ ಕನ್ನಡಕ್ಕೂ ಯಾವುದೇ ಸಂಬಂಧ ಇಲ್ಲ. ವಿವಾದ ಬಂದಿದ್ದು ಜಾಗದ ಬಗ್ಗೆ. ಬಿಗ್ ಬಾಸ್ ಎಷ್ಟೋ ಜನಕ್ಕೆ ಅನ್ನ ಹಾಕಿದೆ. ಕೆಲವೊಮ್ಮೆ ಶೋ ದೊಡ್ಡ ಮಟ್ಟಿಗೆ ಯಶಸ್ಸು ಕಂಡ ಕೂಡಲೇ ಎಷ್ಟೋ ಜನರ ಕಣ್ಣು ಕುಕ್ಕುತ್ತದೆ ಎನ್ನುವ ಮೂಲಕ ಶೋ ಮತ್ತೆ ಶುರುವಾಗಲು ಕಾರಣವಾದ ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಸ್ನೇಹಿತ ನಲಪಾಡ್ ರವರಿಗೆ ಧನ್ಯವಾದ ಎನ್ನುವ ಮೂಲಕ ನಟ ಕಿಚ್ಚ ಸುದೀಪ್ ಬಿಗ್ ಬಾಸ್ ವಿವಾದದ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.






















































