
ಹಾಸನ: ಬ್ರಹ್ಮಾಂಡ ಗುರೂಜಿ ಹಾಸನಾಂಬೆ ದೇವಾಲಯದ ಕುರಿತು ನೀಡಿರುವ ಭವಿಷ್ಯವಾಣಿ ರಾಜ್ಯದ ಧಾರ್ಮಿಕ ಮತ್ತು ರಾಜಕೀಯ ವಲಯಗಳಲ್ಲಿ ಚರ್ಚೆಯ ಕೇಂದ್ರಬಿಂದುವಾಗಿವೆ. ಅದೇನೆಂದರೆ ಹಾಸನಾಂಬೆ ದರ್ಶನ ಇದೇ ಕೊನೆಯ ವರ್ಷ, ಭವಿಷ್ಯದಲ್ಲಿ ಆಕೆಯನ್ನು ನೋಡುವ ಅವಕಾಶ ಇಲ್ಲ ಎಂದು ಸ್ಪೋಟಕ ಭವಿಷ್ಯ ನುಡಿದಿದ್ದಾರೆ.
ಈ ಬಾರಿ ಅಕ್ಟೋಬರ್ 9ರಂದು ಭಕ್ತರಿಗೆ ದರ್ಶನ ನೀಡುವ ಹಾಸನಾಂಬೆ ದೇವಾಲಯ ಬಾಗಿಲು ತೆರೆದಿದ್ದು, ಲಕ್ಷಾಂತರ ಭಕ್ತರು ದೇವಿಯ ದರ್ಶನಕ್ಕಾಗಿ ಆಗಮಿಸಿದ್ದಾರೆ. ಇದೇ ಸಂದರ್ಭದಲ್ಲಿ, ಬ್ರಹ್ಮಾಂಡ ಗುರೂಜಿಯವರು, “ಇದೇ ಹಾಸನಾಂಬೆ ದರ್ಶನದ ಕೊನೆಯ ವರ್ಷ” ಎಂದು ಘೋಷಿಸಿ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಮುಂದೆ ನಮಗಷ್ಟೇ ಅಲ್ಲ, ಯಾವ ಜನಕ್ಕೂ ಸಿಗುವುದಿಲ್ಲ. ಅಷ್ಟು ದೊಡ್ಡ ಮಟ್ಟದ ಅಡಚಣೆ ಆಗುತ್ತದೆ ಎಂಬುದು ಶತಸಿದ್ಧ. ಮುಂದಿನ ವರ್ಷದಿಂದ ಅಮ್ಮನವರ ಸಾನಿಧ್ಯ ಇಲ್ಲ. ಇದನ್ನು ಜನ್ಮದಲ್ಲಿ ಬರೆದಿಟ್ಟುಕೊಂಡು ಬಿಡಿ ಎಂದು ಆತ್ಮವಿಶ್ವಾಸದಿಂದ ತಿಳಿಸಿದ್ದಾರೆ. ಯಾಕಂದ್ರೆ ಹಾಸನಾಂಬೆ ಮತ್ತೆ ತೆಗೀತಾರೋ ಇಲ್ಲವೋ, ತೆಗೆಯುವ ಅವಕಾಶಗಳು ಬರುತ್ತವೋ ಇಲ್ಲವೋ ಅನ್ನುವಷ್ಟರ ಮಟ್ಟಿಗೆ ಸಿದ್ದೇಶ್ವರನ ಕೃಪಾಶೀರ್ವಾದ ಇದೆ. 2025 ರಿಂದ 2032ರ ಅವಧಿಯಲ್ಲಿ ಹಾಸನ ಸಿದ್ದೇಶ್ವರ, ಜೈನ್ ಕಲ್ ಸಿದ್ದೇಶ್ವರ ಮತ್ತು ಇತರ ಪಂಗಡಗಳ ಶಿವಶಕ್ತಿಗಳು ಒಂದೇ ಕಡೆ ಸೇರುತ್ತವೆ. ಇದರಿಂದ 7 ಜನ ಅಕ್ಕತಂಗಿಯರಿಂದ ಘಟಪ್ರಭಾ ನದಿ ತೀರದ ಪ್ರದೇಶಗಳಲ್ಲಿ ಭಾರೀ ಪರಿವರ್ತನೆಗಳು ಸಂಭವಿಸಬಹುದು ಎಂದೂ ಸೂಚಿಸಿದ್ದಾರೆ.






















































