30.1 C
Udupi
Thursday, March 26, 2026
spot_img
spot_img
HomeBlogಜಾನ್ಸನ್ ಬೇಬಿ ಪೌಡರ್ ಬಳಕೆಯಿಂದ ಕ್ಯಾನ್ಸರ್: ಸುಮಾರು 80 ಬಿಲಿಯನ್ ರೂಪಾಯಿಗಳಷ್ಟು ಭಾರಿ ದಂಡ ವಿಧಿಸಿದ...

ಜಾನ್ಸನ್ ಬೇಬಿ ಪೌಡರ್ ಬಳಕೆಯಿಂದ ಕ್ಯಾನ್ಸರ್: ಸುಮಾರು 80 ಬಿಲಿಯನ್ ರೂಪಾಯಿಗಳಷ್ಟು ಭಾರಿ ದಂಡ ವಿಧಿಸಿದ ನ್ಯಾಯಾಲಯ

ಕೆಲವು ವರ್ಷಗಳಿಂದ ಪ್ರತಿಷ್ಠಿತ ಬ್ರಾಂಡ್ ಜಾನ್ಸನ್ & ಜಾನ್ಸನ್ ಬೇಬಿ ಪೌಡರ್‌ನಲ್ಲಿ ಕ್ಯಾನ್ಸರ್‌ಕಾರಕ ಅಂಶಗಳು ಪತ್ತೆಯಾಗಿದ್ದು ಇದರಿಂದ ಈ ಬ್ರಾಂಡ್‌ನ ಪೌಡರ್‌ ಅನ್ನು ಮಾರುಕಟ್ಟೆಯಿಂದ ವಾಪಸ್‌ ಕೂಡ ತೆಗೆದುಕೊಳ್ಳಲಾಗಿತ್ತು. ಆದರೂ ಅದನ್ನು ಪ್ರತಿನಿತ್ಯ ಉಪಯೋಗಿಸಿ ಕ್ಯಾನ್ಸರ್‌ಗೆ ನಿಧಾನವಾಗಿ ಒಳಪಡುತ್ತಿರುವವರ ಸಂಖ್ಯೆ ಹೆಚ್ಚುತ್ತಲಿದೆ.

ಈ ಕಂಪೆನಿ ವಿರುದ್ಧ ಅಮೆರಿಕದ ಕ್ಯಾಲಿಫೋರ್ನಿಯಾ ಮೂಲಕ ಹಲವು ಕೋರ್ಟ್‌ಗಳಲ್ಲಿ ಪ್ರಕರಣಗಳು ದಾಖಲಾಗಿದ್ದು ಜಾನ್ಸನ್ & ಜಾನ್ಸನ್ ಕಂಪೆನಿಯ ಬೇಬಿ ಪೌಡರ್ ಅನ್ನು ಜೀವಿತಾವಧಿಯವರೆಗೆ ಬಳಸಿದ್ದರಿಂದ ಕ್ಯಾನ್ಸರ್ ಉಂಟಾಗಿದ್ದರಿಂದ 2021ರಲ್ಲಿ ಮೃತಪಟ್ಟ ಮೇ ಮೂರ್ ಎನ್ನುವ ಮಹಿಳೆಯ ಕುಟುಂಬಸ್ಥರು ಈ ಕಂಪೆನಿ ವಿರುದ್ಧ ಕ್ಯಾಲಿಫೋರ್ನಿಯಾದ ಕೋರ್ಟ್‌ನಲ್ಲಿ ದೂರು ದಾಖಲು ಮಾಡಿದ್ದರು. ಇದೀಗ ಕೋರ್ಟ್, ಮೃತ ಮಹಿಳೆಯ ಕುಟುಂಬಕ್ಕೆ $16 ಮಿಲಿಯನ್ ಪರಿಹಾರ ಮತ್ತು $950 ಮಿಲಿಯನ್ ದಂಡನಾತ್ಮಕ ಪರಿಹಾರವನ್ನು ನೀಡುವಂತೆ ಸೂಚಿಸಿದೆ.

ಜಾನ್ಸನ್ & ಜಾನ್ಸನ್‌ನ ಟಾಲ್ಕಮ್‌ ಬೇಬಿ ಪೌಡರ್ ಉತ್ಪನ್ನಗಳಲ್ಲಿ ಆಸ್ಬೆಸ್ಟೋಸ್ ಫೈಬರ್‌ಗಳು ಇರುವುದರಿಂದ ಅವರ ಅಪರೂಪದ ಕ್ಯಾನ್ಸರ್‌ಗೆ ಕಾರಣವಾಯಿತು ಎಂದು ಆರೋಪಿಸಿ ಕುಟುಂಬವು ಮಹಿಳೆ ಮೃತಪಟ್ಟ 2021ರ ವರ್ಷವೇ ಮೊಕದ್ದಮೆ ಹೂಡಿತ್ತು. ಅದನ್ನು ಗಂಭೀರವಾಗಿ ಪರಿಗಣಿಸಿದ ಕೋರ್ಟ್ ಭಾರಿ ದಂಡವನ್ನು ವಿಧಿಸಿದ್ದು, ಇದನ್ನು ಪರಿಹಾರದ ರೂಪದಲ್ಲಿ ಕುಟುಂಬಕ್ಕೆ ನೀಡುವಂತೆ ಆದೇಶ ಹೊರಡಿಸಿದೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page