
ರೈಲ್ವೆ ನೇಮಕಾತಿ ಮಂಡಳಿಯಲ್ಲಿ 2,570 ಜೂನಿಯರ್ ಎಂಜಿನಿಯರ್ (JE), ಡಿಪೋ ಮೆಟೀರಿಯಲ್ ಸೂಪರಿಂಟೆಂಡೆಂಟ್ (DMS), ಮತ್ತು ಕೆಮಿಕಲ್ ಮತ್ತು ಮೆಟಲರ್ಜಿಕಲ್ ಅಸಿಸ್ಟೆಂಟ್ (CMA) ಹುದ್ದೆಗಳ ನೇಮಕಾತಿಗಾಗಿ ಕಿರು ಅಧಿಸೂಚನೆಯನ್ನು ಬಿಡುಗಡೆ ಮಾಡಿದ್ದು ಈ ನೇಮಕಾತಿ ಪ್ರಕ್ರಿಯೆಯು ಅಧಿಕೃತ ಅಧಿಸೂಚನೆಯ ಪ್ರಕಾರ, ಅರ್ಜಿ ಪ್ರಕ್ರಿಯೆಯು ಅಕ್ಟೋಬರ್ 31 ರಂದು ಪ್ರಾರಂಭವಾಗಲಿದೆ.
ಅಭ್ಯರ್ಥಿಗಳು ಅಧಿಕೃತ RRB ವೆಬ್‌ಸೈಟ್ rrbapply.gov.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
- ಶೈಕ್ಷಣಿಕ ಅರ್ಹತೆ:
ಜೂನಿಯರ್ ಎಂಜಿನಿಯರ್ ಮತ್ತು ಡಿಪೋ ಮೆಟೀರಿಯಲ್ ಸೂಪರಿಂಟೆಂಡೆಂಟ್ ಹುದ್ದೆಗಳಿಗೆ ಅಭ್ಯರ್ಥಿಗಳು ಎಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್, ಐಟಿ ಅಥವಾ ಸಂಬಂಧಿತ ಕ್ಷೇತ್ರದಲ್ಲಿ ಡಿಪ್ಲೊಮಾ ಅಥವಾ ಬಿಇ/ಬಿಟೆಕ್ ಪದವಿ ಹೊಂದಿರಬೇಕು. ಸಿಎಂಎ ಹುದ್ದೆಗಳಿಗೆ ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರದಲ್ಲಿ ಪದವಿ ಪಡೆದಿರಬೇಕು. - ವಯಸ್ಸಿನ ಮಿತಿ:
ಈ ನೇಮಕಾತಿಗೆ ಅರ್ಜಿ ಸಲ್ಲಿಸಲು, ಅಭ್ಯರ್ಥಿಗಳು ಜನವರಿ 1, 2026 ಕ್ಕೆ 18 ರಿಂದ 33 ವರ್ಷ ವಯಸ್ಸಿನವರಾಗಿರಬೇಕು. ಮೀಸಲಾತಿ ವರ್ಗಗಳಿಗೆ ಸರ್ಕಾರಿ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ. - ಹುದ್ದೆ ಮತ್ತು ವೇತನ ಶ್ರೇಣಿಗಳು:
ಒಟ್ಟು 2,570 ಹುದ್ದೆಗಳು ಜೆಇ, ಡಿಎಂಎಸ್ ಮತ್ತು ಸಿಎಂಎ ಹುದ್ದೆಗಳನ್ನು ಒಳಗೊಂಡಿದ್ದು ಆಯ್ಕೆಯಾದ ಅಭ್ಯರ್ಥಿಗಳು 7 ನೇ ವೇತನ ಆಯೋಗದ ಪ್ರಕಾರ ಹಂತ 6 ರಲ್ಲಿ 35,400ರೂ. ಮಾಸಿಕ ವೇತನವನ್ನು ಇತರ ರೈಲ್ವೆ ಭತ್ಯೆಗಳು ಮತ್ತು ಸವಲತ್ತುಗಳೊಂದಿಗೆ ಪಡೆಯುತ್ತಾರೆ. - ಆಯ್ಕೆ ಪ್ರಕ್ರಿಯೆ:
ನೇಮಕಾತಿ ಪ್ರಕ್ರಿಯೆಯು ನಾಲ್ಕು ಹಂತಗಳಲ್ಲಿ ಪೂರ್ಣಗೊಳ್ಳುತ್ತದೆ. CBT-I, CBT-II, ದಾಖಲೆ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆ. CBT-I ನಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳನ್ನು CBT-II ಗೆ ಕರೆಯಲಾಗುತ್ತದೆ. ವೈದ್ಯಕೀಯ ಫಿಟ್‌ನೆಸ್ ಮತ್ತು ದಾಖಲೆ ಪರಿಶೀಲನೆಯ ನಂತರ ಅಂತಿಮ ಆಯ್ಕೆಯನ್ನು ಮಾಡಲಾಗುತ್ತದೆ.



















