
ಕಾರ್ಕಳ ಬಸ್ ಸ್ಟ್ಯಾಂಡ್ ಬಳಿ ಇರುವ ಮನ್ನಾರ ದೇವಸ್ಥಾನದಲ್ಲಿ ನವರಾತ್ರಿ ಹಬ್ಬದ ಕೊನೆಯ ದಿನವಾದ ಮಂಗಳವಾರ ವಿಶೇಷ “ಕರಗ” ಪೂಜೆ ಅತ್ಯಂತ ವಿಜೃಂಭಣೆಯಿಂದ ನೆರವೇರಿತು,ಕರಗ ಎನ್ನುವ ಪದವು ಧಾರ್ಮಿಕ,ಸಾಂಸ್ಕೃತಿಕ, ಹಾಗೂ ಪೌರಾಣಿಕ ಹಿನ್ನಲೆ ಹೊಂದಿರುವ ಒಂದು ವಿಶಿಷ್ಟ ಆಚರಣೆಯ ಪ್ರತೀಕವಾಗಿದ್ದು, ಇದು ವಿಶೇಷವಾಗಿ ಕುಂಭದ ರೂಪದಲ್ಲಿ ಶಕ್ತಿಯ(ದ್ರೌಪದಿ ದೇವಿ )ಆರಾಧನೆಯಾಗಿದೆ.
ಸುಮಾರು ಐನೂರು ವರ್ಷಕ್ಕಿಂತ ಹೆಚ್ಚು ಇತಿಹಾಸವುಳ್ಳ ಈ ದೇವಸ್ಥಾನದಲ್ಲಿ ವಹ್ನಿಕುಲ ಕ್ಷತ್ರಿಯ ಸಮಾಜದವರು, ಪಾರ್ವತಿ,ಮೀನಾಕ್ಷಿ,ಸುಂದರೇಶ ಹಾಗೂ ಪರಿವಾರ ದೇವರುಗಳನ್ನು ಅನಾಧಿಕಾಲದಿಂದ ಆಚರಿಸಿಕೊಂಡು ಬರುತಿದ್ದು,ವರ್ಷಕ್ಕೊಮ್ಮೆ ಆಚರಿಸುವ ಕರಗ ಪೂಜೆಯ ದಿನ ಸಮಾಜ ಬಾಂಧವರು ಅತ್ಯಂತ ಶ್ರದ್ದಾ ಭಕ್ತಿಯಿಂದ ಪಾಲ್ಗೊಂಡು ಸಂಭ್ರಮಿಸುತ್ತಾರೆ.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕರಗ ಪೂಜೆ ನಡೆಯುವ ಏಕೈಕ ದೇವಸ್ಥಾನವೆಂದರೆ ಅದು ಕಾರ್ಕಳದ ಶ್ರೀಮನ್ನಾರ ದೇವಸ್ಥಾನ ಎಂಬುದು ಗಮನಾರ್ಹ ಸಂಗಾತಿಯಾಗಿದೆ.























































