
ವಂಜಾರಕಟ್ಟೆ ಹಾಲು ಉತ್ಪಾದಕರ ಸಹಕಾರಿ ಸಂಘ (ನಿ )2024-25 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯು ದಿನಾಂಕ 25-09-2025ನೇ ಗುರುವಾರ ಬೆಳಿಗ್ಗೆ 11 ಗಂಟೆಗೆ ಸರಿಯಾಗಿ ವಂಜಾರಕಟ್ಟೆ ಹಾಲು ಉತ್ಪಾದಕರ ಸಹಕಾರಿ ಸಂಘದ ವಠಾರದಲ್ಲಿ ಸಂಘದ ಅಧ್ಯಕ್ಷರಾದ ಜಯರಾಮ್ ಸಾಲ್ಯಾನ್ ರವರ ಅದ್ಯಕ್ಷತೆಯಲ್ಲಿ ನಡೆಯಿತು.
ಸಂಘದ ಸದಸ್ಯರಿಗೆ ವಾರ್ಷಿಕ ಲಾಭಾಂಶವನ್ನು ಶೇಕಡಾ 10%ಡಿವಿಡೆಂಟ್ ಹಾಗೂ 65% ಬೋನಸ್ಸನ್ನು ಹಾಲು ಉತ್ಪಾದಕರಿಗೆ ಉಪನಿಯಮದಂತೆ ನೀಡುವುದೆಂದು ತೀರ್ಮಾನಿಸಲಾಯಿತು.2024-25ನೇ ಸಾಲಿನಲ್ಲಿ ಅತೀ ಹೆಚ್ಚು ಹಾಲು ಹಾಕಿದ 3 ಮಂದಿ ಸದಸ್ಯರಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಹಾಗೂ ಸಂಘದ ಸದಸ್ಯರ ಮಕ್ಕಳಿಗೆ sslc ಮತ್ತು puc ಶೇಕಡಾ 90% ಅಂಕಗಳನ್ನು ಪಡೆದ ಆರು ಮಂದಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಿ ಗೌರವಿಸಲಾಯಿತು.
ಕ್ರೀಡಾ ಪಟುಗಳಾದ ರಾಘವೇಂದ್ರ ರಮೇಶ್ ನಾಯ್ಕ, ಶಶಾಂಕ್ ಮತ್ತು ನಿತಿನ್ ಕುಲಾಲ್ ಮತ್ತು ಸ್ವಯಂ ನಿವೃತ್ತಿಯಾದ ಕಾರ್ಯದರ್ಶಿ ಸತೀಶ್ ಪೂಜಾರಿ ಇವರೆಲ್ಲರಿಗೂ ಸನ್ಮಾನಿಸಲಾಯಿತು.ದ. ಕ ಹಾಲು ಉತ್ಪಾದಕರ ಸಹಕಾರಿ ಸಂಘದ ವಿಸ್ತರಣಾಧಿಕಾರಿಯಾದ ಶಿವಕುಮಾರ್ ಇವರು ಹೈನುಗಾರಿಕೆ ಬಗ್ಗೆ ಮಾಹಿತಿ ನೀಡಿದರು.ಸಂಘದ ಉಪಾಧ್ಯಕ್ಷರಾದ ಜಗನ್ನಾಥ ಶೆಟ್ಟಿ ಹಾಗೂ ನಿರ್ದೇಶಕರುಗಳಾದ ರಮೇಶ್ ಶೆಟ್ಟಿ, ಸಾಧು ಶೆಟ್ಟಿ,ಜಯಂತಿ ಶೆಟ್ಟಿ, ಶಿವಾನಂದ ಪೂಜಾರಿ,ವಿಜಯ, ಬೇಬಿ ಶೆಟ್ಟಿ,ಗೋಪಾಲ ದೇವಾಡಿಗ, ಮಹಾಬಲ ಮೂಲ್ಯ, ರಮೇಶ್ ನಾಯ್ಕ,ಕೃಷ್ಣ, ನಾರಾಯಣ ಶೆಟ್ಟಿ ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷರಾದ ಜಯರಾಮ್ ಸಾಲ್ಯಾನ್ ರವರು ಮಾತನಾಡಿ ಸಂಘದ ಸದಸ್ಯರು ಹಾಲು ಹೆಚ್ಚಿಸಲು ಸಲಹೆ ನೀಡಿದರು.ಸಂಘದ ಸಿಬ್ಬಂದಿಗಳಾದ ಗೀತಾ ಶೆಟ್ಟಿ ಮತ್ತು ರವೀಂದ್ರ ಬಿ ಉಪಸ್ಥಿತರಿದ್ದರು.ಸಂಘದ ಕಾರ್ಯದರ್ಶಿ ಸರಿತಾ ಶೆಟ್ಟಿಯವರು ಕಾರ್ಯಕ್ರಮ ನಿರೂಪಿಸಿ ಧನ್ಯವಾದವಿತ್ತರು



















