ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ರೋವರ್ಸ್ ಮತ್ತು ರೇಂಜರ್ಸ್ ಘಟಕಗಳ ಆಶ್ರಯದಲ್ಲಿ,
ರೋವರ್ಸ್ ಮತ್ತು ರೇಂಜರ್ಸ್ ವಿದ್ಯಾರ್ಥಿಗಳಿಗಾಗಿ ಒಂದು ದಿನದ ಪ್ರವೇಶ್ ಹಾಗೂ ನಿಪುಣ್ ಪರೀಕ್ಷಾ ತರಬೇತಿ ಶಿಬಿರ

ದಿನಾಂಕ 24 -9 -2025 ರಂದು ಸರಕಾರಿ ಪದವಿ ಪೂರ್ವ ಕಾಲೇಜು, ಸಾಣೂರು, ಕಾರ್ಕಳ ಇಲ್ಲಿನ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ರೋವರ್ಸ್ ಮತ್ತು ರೇಂಜರ್ಸ್ ಘಟಕಗಳ ಆಶ್ರಯದಲ್ಲಿ ರೋವರ್ಸ್ ಮತ್ತು ರೇಂಜರ್ಸ್ ವಿದ್ಯಾರ್ಥಿಗಳಿಗಾಗಿ ಒಂದು ದಿನದ ಪ್ರವೇಶ್ ಹಾಗೂ ನಿಪುಣ್ ಪರೀಕ್ಷಾ ತರಬೇತಿ ಶಿಬಿರವನ್ನು ಆಯೋಜಿಸಲಾಗಿತ್ತು.
ತರಬೇತಿ ಶಿಬಿರವನ್ನು ಉಡುಪಿಯ ಸ್ಕೌಟ್ಸ್ ಸಹಾಯಕ ಜಿಲ್ಲಾ ಆಯುಕ್ತರಾದ ವಿತೇಶ್ ಕಾಂಚನ್ ಉದ್ಘಾಟಿಸಿ, ಕಲಿಕೆಯ ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ರೋವರ್ಸ್ ಮತ್ತು ರೇಂಜರ್ಸ್ ಒಂದು ಅದ್ಭುತ ವೇದಿಕೆ ಎಂದರು. ಶಿಸ್ತು, ಸಮಯ ಪಾಲನೆ ಹಾಗೂ ಜೀವನ ಮೌಲ್ಯಗಳನ್ನು ರೂಢಿಸಿಕೊಳ್ಳಲು ಸ್ಕೌಟ್ಸ್ ಸಹಾಯಕಾರಿಯಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾಸಂಸ್ಥೆಯ ಪ್ರಾಂಶುಪಾಲರಾದ ಸುಚೇತ ವಹಿಸಿದ್ದರು.
ರೋವರ್ ಸ್ಕೌಟ್ ಲೀಡರ್ ಆದ ಅರವಿಂದ ಕೆ ಎನ್ ಇವರು ಸ್ವಾಗತಿಸಿದ ಕಾರ್ಯಕ್ರಮದಲ್ಲಿ ಸ್ಮಿತಾ ಜೋಷ್ಮ ಫೆರ್ನಾಂಡಿಸ್ ವಂದಿಸಿ, ದ್ವಿತೀಯ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಸಾನ್ವಿ ನಿರೂಪಿಸಿದರು. 75 ರೋವರ್ ಹಾಗೂ ರೆಂಜರ್ಸ್ ವಿದ್ಯಾರ್ಥಿಗಳು ಶಿಬಿರದ ಪ್ರಯೋಜನವನ್ನು ಪಡೆದರು.






















































